ಮೈಸೂರು,ಸೆಪ್ಟಂಬರ್,24,2020(www.justkannada.in): ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಮಿ ಖರೀದಿ ಮಾಡುತ್ತೇವೆ. ರೈತರಿಂದ ಭೂಮಿ ಪಡೆದು 50-50 ಮಾದರಿಯಲ್ಲಿ ಸೈಟನ್ನು ಹಂಚಲು ತೀರ್ಮಾನಿಸಿದ್ದೇವೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಸಿದರು.
ಪತ್ರಕರ್ತರ ಭವನದಲ್ಲಿ ಸಂವಾದ ಕಾರ್ಯಕ್ರಮ ಮುಡಾ ಅಧ್ಯಕ್ಷ ಹೆಚ್. ವಿ. ರಾಜೀವ್ ರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮುಂದಿನ ದಿನಗಳಲ್ಲಿ ಮುಡಾ ಯೋಜನೆಗಳ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಯಿತು. ಸಂವಾದಕ್ಕೂ ಮುನ್ನ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹೆಚ್.ವಿ ರಾಜೀವ್ ಗೆ ಸನ್ಮಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಸಂಘಕ್ಕೆ ಸ್ವಂತ ನಿವೇಶನ ಕಲ್ಪಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಸೇರಿದಂತೆ ಪತ್ರಕರ್ತರು ಭಾಗಿಯಾಗಿದ್ದರು.
ಸಂವಾದದಲ್ಲಿ ಮಾತನಾಡಿದ ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್, ಮೈಸೂರನ್ನು ಸುಂದರ ನಗರವನ್ನಾಗಿಸಬೇಕು. ನಗರ ಪರಿಕಲ್ಪನೆ ಕ್ಯಾಂಪಕ್ಕ್ಟ್ ಆಗಿರಬೇಕು. 20 ವರ್ಷಗಳ ಹಿಂದೆ ಮೈಸೂರು ಭಿನ್ನವಾಗಿತ್ತು. ಈಗ ಮೈಸೂರು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ವಿಶ್ವವೇ ಮೈಸೂರು ನಗರವನ್ನು ಗುರುತಿಸುತ್ತಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಮೈಸೂರು ಎಲ್ಲರನ್ನು ಕೈಬೀಸಿ ಕರೆಯುತ್ತಿದೆ. ಆದ್ದರಿಂದ ಸ್ವಂತ ಊರನ್ನು ಬಿಟ್ಟು ಜನರು ಮೈಸೂರಿನಲ್ಲಿ ನೆಲೆ ನಿಲ್ಲಲು ಬಯಸುತ್ತಿದ್ದಾರೆ. ಯಾರು ಮೈಸೂರಿನಲ್ಲಿ 20 ,30 ವರ್ಷಗಳಿಂದ ವಾಸವಿದ್ದು ಯಾರಿಗೆ ಸ್ವಂತ ಸೂರಿಲ್ಲವೊ, ಅವರಿಗೆ ಸೂರು ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಮಿ ಖರೀದಿ…
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಮಿ ಖರೀದಿ ಮಾಡುತ್ತೇವೆ. ಉತ್ತಮ ಉಪನಗರಗಳ ನಿರ್ಮಾಣದ ಗುರಿಯನ್ನು ಹೊಂದಿದ್ದೇವೆ. ಕೆಲ್ಲಲ್ಲಿ ,ಜಯಪುರ, ಉದ್ಭುರು ,ಡಿ.ಸಾಲುಂಡಿ, ಕೆರೆಹುಂಡಿ ಸೇರಿದಂತೆ ಅನೇಕ ರೈತರನ್ನು ಭೇಟಿ ಮಾಡಿ ಭೂಮಿ ಕುರಿತು ಚರ್ಚೆ ಮಾಡಿದ್ದೇವೆ. ರೈತರಿಂದ ಭೂಮಿ ಪಡೆದು 50-50 ಮಾದರಿಯಲ್ಲಿ ಸೈಟನ್ನು ಹಂಚಲು ತೀರ್ಮಾನಿಸಿದ್ದೇವೆ. ಪ್ರಾಧಿಕಾರದ ಬಡಾವಣೆಗಳ ಗುಣಮಟ್ಟ ಖಾಸಗಿ ಬಡಾವಣೆಗಿಂತ ಉತ್ತಮವಾಗಿರುತ್ತದೆ. ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀದುತ್ತೇವೆ ಸ್ಥಳೀಯರಿಗೂ ಕೆಲಸ ನೀಡುವ ಅವಕಾಶ ಮಾಡಿಕೊಡುತ್ತೇವೆ. ಉತ್ತಮ ಕೆಲಸ ಮಾಡುವ ಗುತ್ತಿಗೆದಾರರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಯೋಜನೆಗಳನ್ನು ತ್ವರಿತವಾಗಿ ಮಾಡಲು ಪ್ರಯತ್ನ ಮಾಡುತ್ತೇವೆ. ಸಾಮಾನ್ಯ ಜನರು ಕೂಡ ಪ್ರಾಧಿಕಾರದಿಂದ ನಮಗೂ ಮನೆ ಸಿಗುತ್ತೆ ಎನ್ನುವ ಭರವಸೆ ಮೂಡಿಸುತ್ತೇವೆ ಎಂದು ಹೆಚ್.ವಿ ರಾಜೀವ್ ತಿಳಿಸಿದರು.
ಪತ್ರಕರ್ತರ ಸಂಘದ ಸಿ.ಎ ನಿವೇಶನ ನೀಡುವ ಕುರಿತು ಶೀಘ್ರ ತೀರ್ಮಾನ ಮಾಡಲಾಗುವುದು ಎಂದು ರಾಜೀವ್ ತಿಳಿಸಿದರು.
ವಿಜೇಯೇಂದ್ರ ಸೂಪರ್ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್…
ವಿಜೇಯೇಂದ್ರ ಸೂಪರ್ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮುಡಾ ಅಧ್ಯಕ್ಷ ರಾಜೀವ್, ವಿಜೆಯೇಂದ್ರ ಬಿಜೆಪಿಯ ಯುವ ನಾಯಕ. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ಧಾರೆ. ಸರ್ಕಾರದ ಅಭಿವೃದ್ಧಿ ವಿಚಾರದಲ್ಲಿ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಅವರ ಬೆಳೆವಣಿಗೆಯನ್ನು ಸಹಿಸದೆ ಕೆಲವರು ಈ ರೀತಿಯ ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ. ಕಾಂಗ್ರೆಸ್ ಈಗಾಗಲೇ ದೇಶದಲ್ಲಿ ಕುಸಿದು ಹೋಗಿದೆ. ಆದ್ದರಿಂದ ಸಿದ್ದರಾಮಯ್ಯ ಈ ರೀತಿ ಹೇಳಿರಬಹುದು ಎಂದು ಟಾಂಗ್ ನೀಡಿದರು.
Key words: Decision – get – land – farmers -distribute – site – 50-50 basis-MUDA- President -HV Rajeev.