ನವದೆಹಲಿ,ಜು,5,2019(www.justkannada.in): ಕುಡಿಯುವ ನೀರು, ಜಲ ಸಂವರ್ಧನೆ ಯೋಜನೆಗೆ ಮೊದಲ ಆಧ್ಯತೆ ನೀಡಲು ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಹರ್ ಘರ್ ಜಲ್ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಜಲ ಶಕ್ತಿ ಸಚಿವಾಲಯ ಸ್ಥಾಪನೆ. ಕುಡಿಯುವ ನೀರು , ಜಲ ಸಂವರ್ಧನೆ ಯೋಜನೆಗೆ ಮೊದಲ ಆಧ್ಯತೆ. ಹರ್ ಘರ್ ಜಲ್ ಯೋಜನೆ ಜಾರಿಗೆ ನಿರ್ಧಾರ ಮಾಡಲಾಗಿದೆ. ಶೂನ್ಯ ಬಂಡವಾಳ ಕೃಷಿಗೆ ಒತ್ತು ನೀಡಲಾಗಿದ್ದು, 10 ಸಾವಿರ ಕೃಷಿಕರ ಸಂಘ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ, ಬೆಳೆಗಳಿಗೆ ಸೂಕ್ತ ಬೆಲೆ, ಕೃಷಿ ಆಧರಿತ ಕೈಗಾರಿಕೆಗಳಿಗೆ ಖಾಸಗಿ ಹೂಡಿಕೆಗೆ ಒತ್ತು ಕೊಡುತ್ತೇವೆ ಎಂದು ಬಜೆಟ್ ಮಂಡನೆ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಜೇನು , ಬಿದಿರು , ಖಾದಿ ಉದ್ದಿಮೆಗಳಿಗೆ ಸರ್ಕಾರದ ಉತ್ತೇಜನ. ಮಳೆ ಕೊಯ್ಲು ಅಂತರ ಹೆಚ್ಚಿಸಲು ಜಲಜೀವನ ಮಿಷನ್ ಯೋಜನೆ ತರಲಾಗುತ್ತದೆ ಗ್ರಾಮೀಣ ಪ್ರದೇಶದಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಯಿತು.
Key words: Decision – implementation -Her Ghar Jal- Schem- Announcement – Union Budget.