ಬೆಂಗಳೂರು,ಸೆ,6,2019(www.justkannada.in): ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಲೀಸ್ ಗೆ ಕೊಡಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಿಎಂ ಯಡಯೂರಪ್ಪ, ಮೈ ಶುಗರ್ ಕಂಪನಿಯ 330 ನೌಕರರು ವಿಆರ್ ಎಸ್ ಪಡೆಯಲು ಸಿದ್ಧರಾಗಿದ್ದಾರೆ. ಇದಕ್ಕೆ 22 ಕೋಟಿ ರೂ. ಬೇಕಾಗುತ್ತದೆ. ಅವರಿಗೆಲ್ಲ ವಿಆರ್ ಎಸ್ ಕೊಡಲಾಗುವುದು. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಲೀಸ್ ಗೆ ಕೊಡಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಾರ್ಖಾನೆ ಲೀಸ್ ಮೇಲೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮೈ ಶುಗರ್ ನ್ನು ಲೀಸ್ ಗೆ ಕೊಡಬೇಕ ಅಥವಾ ಒ ಅಂಡ್ ಎಂ ಮಾಡಬೇಕಾ ಎಂಬ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಒಂದು ವೇಳೆ ಒ ಅಂಡ್ ಎಂ ಮಾಡಿದರೆ ಪ್ರತಿ ವರ್ಷ 25 ಕೋಟಿ ರೂ. ನೀಡಬೇಕು. ಇದಕ್ಕೆ ಆಗಲೇ ಸಾಕಷ್ಟು ದುಡ್ಡು ಕೊಡಲಾಗಿದ್ದು ಸರ್ಕಾರಕ್ಕೆ ಹೊರೆ ಆಗುತ್ತಿದೆ. ಅದ್ದರಿಂದ ಕೂಡಲೇ ಪಾಂಡವಪುರ ಸಕ್ಕೆರೆ ಕಾರ್ಖಾನೆಯನ್ನ ಲೀಸ್ ಗೆ ಕೊಡಲು ತೀರ್ಮಾನ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
Key words: Decision – lease- Pandavapura- Sugar Factory- immediately-CM BS Yeddyurappa.