ಬೆಂಗಳೂರು,ಜನವರಿ,28,2021(www.justkannada.in): ಖಾಸಗಿ ಶಾಲೆಗಳ ಶುಲ್ಕ ನಿಗದಿ ಪಡಿಸುವಂತೆ ಆಗ್ರಹಿಸಿ ಜನವರಿ 31 ರಂದು ಪೋಷಕರ ಸಂಘಟನೆ ರಸ್ತೆಗಿಳಿದು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದೆ.
ಖಾಸಗಿ ಶಾಲೆಗಳ ಶುಲ್ಕ ನಿಗದಿ ಸಂಬಂಧ ಸಭೆ ನಡೆಸಿ ಎರಡು ವಾರಗಳೇ ಕಳೆದಿದೆ. ಈ ಸಂಬಂಧ ಈಗಾಗಲೇ ಎರಡು ಬಾರಿ ಪ್ರತಿಭಟನೆ ಮಾಡಲಾಗಿದೆ. ಸಚಿವರ ಮನೆ ಮುಂದೆಯೂ ಪ್ರತಿಭಟನೆ ಮಾಡಲಾಗಿದೆ. ಆದರೂ ಆದರೆ ಶುಲ್ಕ ನಿಗದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನಸ್ಸು ಮಾಡಿಲ್ಲ.
ಸಂಜೆಯೊಳಗೆ ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡಬೇಕು. ಇಲ್ಲದಿದ್ದರೇ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ಜನವರಿ 31 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಪೋಷಕ ಸಂಘಟನೆಗಳಿ ತಿಳಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.
ENGLISH SUMMARY….
Parents Associations decides to protest on Jan. 31, demanding fixing of private school fees
Bengaluru, Jan. 28, 2021 (www.justkannada.in): The members of various Parents Associations have decided to stage a protest on January 31, demanding the State Government to intervene in fixing private school fees.
A meeting regarding fixing the fees of private schools was held about two weeks ago, and two protests have also been held. A demonstration was also held in front of the Education Minister Suresh Kumar’s house, but he has not made his mind to intervene.
Hence, the members of various parents’ associations have demanded the Education Minister to settle the matter immediately, or else they have warned of taking out a massive protest on January 31.
Keywords: Parents association/ private school fees/ protest on Jan. 31
Key words: Decision – parents ‘organizations – protest – Jan. 31 -demanding -private schools’- fees