ಮೈಸೂರು,ಸೆ,11,2019(www.justkannada.in): ಇತ್ತೀಚೆಗೆ ಭಾರಿ ಮಳೆಯಿಂದಾಗಿ ಕುಸಿದಿದ್ದ ಮೈಸೂರಿನ ಸರಸ್ವತಿಪುರಂನ ಅಗ್ನಿಶಾಮಕದಳ ಕಟ್ಟಡವನ್ನ ಮರು ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ.
ನಗರದ ಸರಸ್ವತಿಪುರಂನಲ್ಲಿನ ಅಗ್ನಿಶಾಮಕದಳ ಕಟ್ಟಡ ಭಾರಿ ಮಳೆಯಿಂದಾಗಿ ಕುಸಿದಿತ್ತು. ಸದ್ಯ ಅಂದು ಯಾವುದೇ ಅಪಾಯ ಸಂಭವಿಸಿರಲಿಲ್ಲ . ಇದೀಗ ಅಗ್ನಿಶಾಮಕದಳದ ಕಟ್ಟಡವನ್ನ ಮರುನಿರ್ಮಾಣ ಮಾಡಲು ಬೆಂಗಳೂರಿನಲ್ಲಿ ನಡೆದ ಪ್ರಾಚ್ಯವಸ್ತು ಮತ್ತು ಲೋಕಪಯೋಗಿ ಹಾಗೂ ಅಗ್ನಿಶಾಮಕ ಅಧಿಕಾರಗಳ ನೇತೃತ್ವದ ಸಭೆ ತೀರ್ಮಾನಿಸಲಾಗಿದೆ.
ಪಾರಂಪರಿಕ ತಜ್ಞರ ವರದಿ ಬಂದರ ನಂತರ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಿ ನಂತರ ಮರು ನಿರ್ಮಾಣಕ್ಕೆ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ. ಈ ಕಟ್ಟಡ ಸುಮಾರು l2O ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಪಾರಂಪರಿಕ ಕಟ್ಟಡವಾಗಿದ್ದು, ಮಳೆ ಅವಾಂತರದಿಂದ ಕುಸಿದಿತ್ತು.
Key words: Decision – rebuild -Mysore -Fire Station-building