ಬೆಂಗಳೂರು,ಡಿಸೆಂಬರ್,18,2020(www.justkannada.in): ಕೊರೋನಾ ನಡುವೆ ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇನ್ನರೆಡು ದಿನಗಳಲ್ಲಿ ಶಾಲೆ ಆರಂಭದ ಭವಿಷ್ಯ ನಿರ್ಧಾರವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಾಲೆ ಆರಂಭಿಸಲು ಸಲಹೆ ನೀಡಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲೆ ಆರಂಭಕ್ಕೆ ತಜ್ಞರ ತಂಡ ಸಲಹೆ ನೀಡಿದೆ. ಶಾಲೆಗಳ ಆರಂಭದ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೊಸ ವರ್ಷದಿಂದ ಶಾಲೆಗಳ ಆರಂಭಿಸೋ ಚಿಂತನೆಯಿದೆ. ಕೊರೋನಾ ಭೀತಿಯ ನಡುವೆಯೂ ಶಾಲೆ ಆರಂಭಿಸಿದ್ರೇ, ಕೊರೋನಾ ಪರೀಕ್ಷೆ ಕೂಡ ಕಡ್ಡಾಯವಾಗಲಿದೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಎಸ್.ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿ ಮೊದಲು ಆರಂಭಿಸಲಾಗುತ್ತದೆ. ನಂತರ ಉಳಿದ ತರಗತಿಗಳನ್ನ ಆರಂಭಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. ಕೋವಿಡ್ ಮಾರ್ಗಸೂಚಿ ಪಾಲಿಸಿ ಶಾಲೆ ಆರಂಭ ಮಾಡಲಾಗುತ್ತದೆ. ಶಾಲೆ ಆರಂಭಿಸಿದರೇ ಜೂನ್ ಜುಲೈನಲ್ಲಿ ಪರೀಕ್ಷೆ ಮಾಡುತ್ತೇವೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಸಮತ ನೀಡುತ್ತೇವೆ ತೊಂದರೆ ಆಗದಂತೆ ವೇಳಾಪಟ್ಟಿ ರಚನೆ ಮಾಡುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
english summary…
We will decide on reopening schools within the next two days: Education Minister Suresh Kumar
Bengaluru, Dec.18, 2020 (www.justkannada.in): “The State Government is contemplating reopening the schools in the State, and a decision will be arrived at in this regard, in the next two days,” said Primary and Secondary Education Minister Suresh Kumar.
The Covid Technical Advisory Committee has suggested opening the schools. In his response to this, Education Minister Suresh Kumar said, “all arrangements are being made to commence the schools from the new year. Covid testing will also be mandatory. In the first phase, we will commence SSLC and PUC classes and later discuss commencing other classes. If classes begin, exams will be in June or July. We will not make students suffer we will set the time table so that it will be convenient for them. We will decide in this regard within the next two days,” he explained.
Keywords: SSLC/ PUC/ reopening of schools/ Suresh Kumar/ Education Minister
Key words: decision – school -opening – two days-Education Minister- Suresh Kumar- clarified.