ಮೈಸೂರು,ಸೆ,23,2019(www.justkannada.in): ರಾಜ್ಯದಲ್ಲಿ 15 ಮಂದಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ವಿನೂತನ ಮಾದರಿಯ ಮತಯಂತ್ರ ಬಳಸಲು ನಿರ್ಧಾರ ಮಾಡಲಾಗಿದೆ.
ಅಕ್ಟೋಬರ್ 2l ರಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ಮತದಾನಕ್ಕೆ ನೂತನ M3 ಇವಿಎಂ ಯಂತ್ರ ಬಳಸಲು ತೀರ್ಮಾನಿಸಲಾಗಿದೆ. ಕಳೆದ ಬೆಂಗಳೂರು ಬಿಬಿಎಂಪಿ ಚುನಾವಣೆ ಹಾಗೂ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲೂ M3 ಇವಿಎಂ ಯಂತ್ರ ಬಳಕೆ ಮಾಡಲಾಗಿತ್ತು.
ಈ ಹಿಂದಿನ ಚುನಾವಣೆಗಳಲ್ಲಿ M2 ಇವಿಎಂ ಯಂತ್ರಗಳನ್ನ ಬಳಸಲಾಗುತ್ತಿತ್ತು. ಮೊದಲ ಬಾರಿಗೆ ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಈ ಯಂತ್ರ ಬಳಕೆ ಮುಂದಾಗಿದ್ದು,ಈ ಯಂತ್ರವು M2ಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಮಾಹಿತಿ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲಾಗಿದೆ…
ಸದ್ಯ ಮೈಸೂರು ಜಿಲ್ಲೆಯಲ್ಲಿ ನಡೆಯಲಿರುವ ಹುಣಸೂರು ಉಪಚುನಾವಣೆಯಲ್ಲಿ ಈ ನೂತನ ತಂತ್ರವನ್ನ ಬಳಕೆ ಮಾಡಲು ಮುಂದಾಗಿದ್ದು, ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.
Key words: Decision – use- innovative model- M3 EVM machine -state by-election.