ಬೆಂಗಳೂರು,ಜೂನ್,20,2024 (www.justkannada.in): ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನ ಕೈಗೊಳ್ಳಲಾಗಿದ್ದು ಈ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸಚಿವ ಸಂಪುಟದ ನಿರ್ಣಯಗಳ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಿಷ್ಟು…
ಭಾರತ್ ಚಿನ್ನದ ಗಣಿ ಸಂಸ್ಥೆಯ, ಕೆಜಿಎಫ್ ಕೋಲಾರ ಜಿಲ್ಲೆಯಲ್ಲಿ ನಿಷ್ಕ್ರಿಯಗೊಂಡಿರುವ ಗಣಿಗುತ್ತಿಗೆ ಪ್ರದೇಶದಲ್ಲಿನ 13 Tailing Dumps ಗಳ 1003.4 ಎಕರೆ ಪ್ರದೇಶದಲ್ಲಿ MMDR ಕಾಯ್ದೆಯ ಕಲಂ 17ರಲ್ಲಿ ಪ್ರದತ್ತವಾಗಿರುವ ವಿಶೇಷ ಅಧಿಕಾರವನ್ನು ಚಲಾಯಿಸಿ ಗಣಿಗುತ್ತಿಗೆ ಚಟುವಟಿಕೆಗಳನ್ನು ಮುಂದುವರೆಸಲು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಸಚಿವ ಸಂಪುಟ ಸಹಮತಿ ನೀಡಿದೆ.
5213.21 ಹೆಕ್ಟೇರ್ ಪ್ರದೇಶದಲ್ಲಿ ಈ ಚಟುವಟಿಕೆಗಳು ನಡೆಯಲಿವೆ. 75.24 ಕೋಟಿ 2022-23 ರವರೆಗೆ ಬಿಜಿಎಂಎಲ್ ರಾಜ್ಯಕ್ಕೆ ಬಾಕಿ ಮೊತ್ತವನ್ನು ಪಾವತಿಸಬೇಕಿದೆ 2330 ಎಕರೆ ಭೂಮಿಯನ್ನು ನಮ್ಮ ಸರ್ಕಾರಕ್ಕೆ ಕೈಗಾರಿಕಾ ವಸಾಹತುವನ್ನು ಸ್ಥಾಪಿಸಲು ನೀಡಬೇಕೆನ್ನುವ ಬೇಡಿಕೆ ಸರ್ಕಾರದ್ದು. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ಒದಗಿಸಿದರು.
ಜನವರಿ-26ರ ಗಣರಾಜ್ಯೋತ್ಸವ ದಿನದೊಂದಿಗೆ ಆಗಸ್ಟ್-15ರ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಸಹ ಕಡ್ಡಾಯವಾಗಿ ಇಡಲು ಸೂಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಹಾಗೂ ನವೆಂಬರ್-26ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಮೇಲ್ಕಂಡ ಎಲ್ಲಾ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯಗಳಲ್ಲಿ ರಾಜ್ಯದಲ್ಲಿ ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ (PM- USHA) ಯೋಜನೆಯನ್ನು ಆಯಾಯ ವಿಶ್ವವಿದ್ಯಾಲಯಗಳ ವಿಸ್ತೃತ ಯೋಜನಾ ವರದಿಯಲ್ಲಿ ಸೂಚಿಸಿರುವಂತೆ ಬೆಂಗಳೂರು ವಿಶ್ವವಿದ್ಯಾಲಯ (ಬೆಂಗಳೂರು), ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಬೆಳಗಾವಿ), ಕರ್ನಾಟಕ ವಿಶ್ವವಿದ್ಯಾಲಯ (ಧಾರವಾಡ), ಮಂಗಳೂರು ವಿಶ್ವವಿದ್ಯಾಲಯ (ಮಂಗಳೂರು), ಕಲಬುರಗಿ ವಿಶ್ವವಿದ್ಯಾಲಯ (ಕಲಬುರಗಿ) ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ (ಬೆಂಗಳೂರು) ಗಳಲ್ಲಿ ಕೇಂದ್ರದ ವಂತಿಕೆ ರೂ.167.86 ಮತ್ತು ರಾಜ್ಯದ ವಂತಿಕೆ ರೂ. 111.91 ಕೋಟಿ ಒಟ್ಟು ರೂ.279.77 ಕೋಟಿಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಶತಮಾನೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಸಂಸ್ಥೆಯಡಿ ಬರುವ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ನೂತನ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ರೂ.75.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಡಿ ರಾಜ್ಯದ 46,829 ಸರ್ಕಾರಿ ಶಾಲೆಗಳು ಮತ್ತು 1234 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯ ಯೋಜನೆಯನ್ನು ರೂ.29.19 ಕೋಟಿ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು (ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರೂ.25.85 ಕೋಟಿ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರೂ.3.34 ಕೋಟಿ) ಸಚಿವ ಸಂಪುಟ ನಿರ್ಧರಿಸಿದೆ.
ರಾಜ್ಯದ 8 ಜಿಲ್ಲೆಗಳಲ್ಲಿನ 201 KRIES ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೋಟರಿ ಇಂಟರ್‍ನ್ಯಾಷನಲ್ ಬೆಂಗಳೂರು ಇವರ ಸಹಭಾಗಿತ್ವದೊಂದಿಗೆ ಒಟ್ಟು ವೆಚ್ಚ ರೂ.2.37 ಕೋಟಿಗಳಲ್ಲಿ ರೋಟರಿ ಇಂಟರ್‍ನ್ಯಾಷನಲ್ ಸಂಸ್ಥೆ ವತಿಯಿಂದ ರೂ.1.87 ಕೋಟಿಗಳನ್ನು ಮತ್ತು KRIES ಸಂಸ್ಥೆ ವತಿಯಿಂದ ರೂ.49.89 ಲಕ್ಷಗಳನ್ನು ಭರಿಸುವ ಷರತ್ತಿಗೊಳಪಟ್ಟು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕುಸನೂರ ವಸತಿ ಯೋಜನೆಯಲ್ಲಿ ಕುಸನೂರ ಗ್ರಾಮದ ವಿವಿಧ ಸರ್ವೆ ನಂಬರ್‍ಗಳಲ್ಲಿ ವಸತಿ ಅಭಿವೃದ್ಧಿ ಯೋಜನೆಗೆ 2016-17 ನೇ ಸಾಲಿನ ದರಪಟ್ಟಿಯಂತೆ ಅನುಮೋದನೆಯಾಗಿರುವ ರೂ.94.80 ಕೋಟಿಗಳ ಅಂದಾಜು ಮೊತ್ತವನ್ನು ಪ್ರಾಧಿಕಾರವು 2021-22ನೇ ಸಾಲಿನ ಏಕರೂಪ ದರಪಟ್ಟಿ ಮತ್ತು ಶೇ.18% ರಷ್ಟು ಜಿಎಸ್‍ಟಿ ತೆರಿಗೆಯನ್ನು ಅಳವಡಿಸಿಕೊಂಡು ಸಲ್ಲಿಸಿರುವ ಪರಿಷ್ಕøತ ಮೊತ್ತ ರೂ.122.40 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಣಬರ್ಗಿ ಗ್ರಾಮದಲ್ಲಿ ವಸತಿ ಯೋಜನೆ ಸಂಖ್ಯೆ: 61 ರಲ್ಲಿ ಒಟ್ಟು 157 ಎಕರೆ 1 ಗುಂಟೆ 8 ಆಣೆ ಒಟ್ಟಾರೆ ಜಮೀನಿನಲ್ಲಿ ವಸತಿ ಬಡಾವಣೆಯನ್ನು ಅಭಿವೃದ್ಧಿ ಸಲುವಾಗಿ ಅನುಮೋದನೆಯಾದ ಒಟ್ಟು 127.71 ಕೋಟಿಗಳ ಮೊತ್ತದ ಅಂದಾಜು ಪತ್ರಿಕೆಯನ್ನು 2023-24 ನೇ ಸಾಲಿನ ಚಾಲ್ತಿಯಲ್ಲಿರುವ ಪ್ರಕಟಿತ ಏಕರೂಪ ಅನುಸೂಚಿ ದರಗಳ ಅನ್ವಯ ಅಂದಾಜು ಪತ್ರಿಕೆಗಳನ್ನು ಪರಿಷ್ಕರಿಸಿರುವುದರಿಂದ ಪರಿಷ್ಕøತ ಮೊತ್ತ ರೂ.137.70 ಕೋಟಿಗಳ ಅಂದಾಜು ಪತ್ರಿಕೆಗೆ ಷರತ್ತಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.
ಚಿರಂತನ ಅಕಾಡೆಮಿ, ದಾವಣಗೆರೆ ಇವರಿಗೆ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಶಾಲೆ ಹಾಗೂ ಸಭಾಂಗಣ ನಿರ್ಮಾಣಕ್ಕಾಗಿ ಹರಿಹರ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ ಹಂಚಿಕೆಯಾಗಿರುವ 2994.13 ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನದ ಗುತ್ತಿಗೆ ಮೊತ್ತವನ್ನು ಕಡಿಮೆ ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟ ಮುಂದೂಡಿದೆ.
ಕರ್ನಾಟಕ ರಾಜ್ಯ ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಳಕೆ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರಸ್ತುತ ವಾರ್ಷಿಕ ಬೇಡಿಕೆ ಸಹಿತ ವಸೂಲಿ ಮಾಡುವುದು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಮತ್ತು ವಾರ್ಷಿಕ ಬೇಡಿಕೆಗಳಿಗನುಗುಣವಾಗಿ ಆಸ್ತಿಗಳಿಂದ ವಸೂಲಿ ಮಾಡಬೇಕಾದ ಆಸ್ತಿ ತೆರಿಗೆಯನ್ನು ಸಮರ್ಪಕ ವಸೂಲಿಗೆ ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆಯುವುದು, ಸದರಿ ಸ್ವ-ಸಹಾಯ ಗುಂಪುಗಳಿಗೆ ವಸೂಲಾದ ಮೊತ್ತದಲ್ಲಿನ ಶೇ.5 ರಷ್ಟನ್ನು ಪ್ರೊತ್ಸಾಹ ಧನ ರೂಪದಲ್ಲಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಆಸ್ತಿ ತೆರಿಗೆ ಮೊತ್ತ 1860 ಕೋಟಿ ಬಾಕಿ ಇದ್ದು, ಈ ಮೊತ್ತವನ್ನು ವಸೂಲು ಮಾಡಲು ಸ್ವಸಹಾಯ ಗುಂಪುಗಳ ನೆರವು ಪಡೆಯಲು ತೀರ್ಮಾನಿಸಿದೆ.
.ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾವೇಶಗೊಳಿಸುವ ದಿನಾಂಕ, ಸ್ಥಳ ಮತ್ತು ವೇಳೆಯನ್ನು ನಿಗದಿಪಡಿಸಿ ಕರ್ನಾಟಕ ವಿಧಾನ ಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನವನ್ನು ಕರೆಯುವಂತೆ ಮಾನ್ಯ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ದಿನಾಂಕ ಗೊತ್ತು ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗಿದೆ.
ಒಳಾಡಳಿತ ಇಲಾಖೆಯಿಂದ Cr PC Act 1973 ಕಲಂ 2(s) ರಡಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಒಟ್ಟು 33 ಘಟಕಗಳನ್ನು ಅನುಬಂಧ-3 ರಂತೆ ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಣೆ ಮಾಡಲು ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ; ಸಮಾಜ ಕಲ್ಯಾಣ ಇಲಾಖೆ ಮತ್ತು ಗೃಹ ಇಲಾಖೆಗಳು ಎರಡೂ ಸೇರಿ ಸಚಿವ ಸಂಪುಟದ ಈ ತೀರ್ಮಾನ ಅನುಷ್ಠಾನಗೊಳಿಸಲು ಸಿಬ್ಬಂದಿ ಮತ್ತು ಇತರ ವಿವರಗಳನ್ನು ಅಂತಿಮಗೊಳಿಸಲು ಸೂಚಿಸಲಾಗಿದೆ. ಪೋಲಿಸ್ ಠಾಣೆಗಳ ಮೇಲಿನ ಕೆಲಸದ ಹೊರೆಯನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.
ಹಾಸನ ಜಿಲ್ಲೆ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪರಿಷ್ಕøತ ಅಂದಾಜಿನಲ್ಲಿ ಅಳವಡಿಸಿಕೊಂಡಿರುವ ಮಾರ್ಪಟಿತ ಕಾಮಗಾರಿಗಳಿಗೆ ಮತ್ತು ಪರಿಷ್ಕøತ ಮೊತ್ತ ರೂ.59.57 ಕೋಟಿಗಳ ಅಂದಾಜಿಗೆ ಅನುಮೋದನೆ ನೀಡಲು; ಸದರಿ ಕಾಮಗಾರಿಯ ಬಾಕಿ ಮೊತ್ತವನ್ನು 2024-25ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆ: 4202-02-104-1-03-386 ರಡಿ ಹಂಚಿಕೆಯಾಗಿರುವ ಅನುದಾನದಲ್ಲಿ ಬಿಡುಗಡೆಗೊಳಿಸಲು; ಸಚಿವ ಸಂಪುಟ ನಿರ್ಧರಿಸಿದೆ.
ಹಾಸನ ಜಿಲ್ಲೆ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪರಿಷ್ಕøತ ಅಂದಾಜಿನಲ್ಲಿ ಅಳವಡಿಸಿಕೊಂಡಿರುವ ಮಾರ್ಪಟಿತ ಕಾಮಗಾರಿಗಳಿಗೆ ಮತ್ತು ಪರಿಷ್ಕøತ ಮೊತ್ತ ರೂ.59.57 ಕೋಟಿಗಳ ಅಂದಾಜಿಗೆ ಅನುಮೋದನೆ ನೀಡಲು; ಹಾಗೂ ಸದರಿ ಕಾಮಗಾರಿಯ ಬಾಕಿ ಮೊತ್ತವನ್ನು 2024-25ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆ: 4202-02-104-1-03-386 ರಡಿ ಹಂಚಿಕೆಯಾಗಿರುವ ಅನುದಾನದಲ್ಲಿ ಬಿಡುಗಡೆಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ.
5-ವರ್ಷದ ವಾರ್ಷಿಕ ನಿರ್ವಹಣಾ ಯೋಜನೆಯನ್ನು ಒಳಗೊಂಡಿರುವ ಬಾಹ್ಯ ನೆರವಿನೊಂದಿಗೆ ಪ್ರಗತಿ ಪಥ ಯೋಜನೆಯಡಿ 7110.00 ಕಿ.ಮೀಗಳ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ರೂ.5190.00 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು (ರೂ.3633.00 ಕೋಟಿಗಳ ಬಾಹ್ಯ ಸಹಾಯ ಮತ್ತು ರಾಜ್ಯದ ಕೊಡುಗೆ ರೂ.1557.00 ಕೋಟಿಗಳ (ಟೆಂಡರ್ ಪ್ರೀಮಿಯಂ ಮೊತ್ತವನ್ನು ಹೊರತುಪಡಿಸಿ)
ಬಿ) ಈ ಯೋಜನೆಯನ್ನು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖಾಂತರ ಆಯಾ ವಿಧಾನ ಸಭೆ ಕ್ಷೇತ್ರದಲ್ಲಿ ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಕಾಮಗಾರಿಗಳನ್ನು ಸೂಕ್ತ ಮೊತ್ತದ ಪ್ಯಾಕೇಜ್‍ಗಳನ್ನಾಗಿ ಒಟ್ಟಾಗಿಸಿ ಕರ್ನಾಟಕ ಪಾರದರ್ಶನ ಅದಿನಿಯಮಗಳನ್ವಯ ಟೆಂಡರ್‍ಗಳನ್ನು ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಕರೆದು ಅನುಷ್ಟಾನಕ್ಕೆ ತರಲು;
ಸಿ) 2024-25ನೇ ಸಾಲಿನಲ್ಲಿ ಡಿ.ಪಿ.ಆರ್ ತಯಾರಿಕೆಗೆ ರೂ.28.00 ಕೋಟಿಗಳನ್ನು ನೀಡಲು ಆರ್ಥಿಕ ಇಲಾಖೆಯನ್ನು ಕೋರಲು;
“Karnataka Land Grant Rules, 1969 ಹಾಗೂ PWD D-code ರ ನಿಯಮಗಳನ್ವಯ ನಿಯತಕಾಲಿಕವಾಗಿ ವಾರ್ಷಿಕ ಬಾಡಿಗೆಯನ್ನು ನಿಗದಿಪಡಿಸಿ, ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಗ್ರಾಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಇವರು ನಡೆಸುತ್ತಿರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಲೀಸ್ ನೀಡಲಾಗಿರುವ ಕರ್ನಾಟಕ ನೀರಾವರಿ ನಿಗಮದ 2.70 ಎಕರೆ ಜಾಗದ ಲೀಸ್ ಅವಧಿಯನ್ನು ದಿನಾಂಕ: 01.04.2023 ರಿಂದ 31.03.2053 ರವರೆಗೆ ವಿಸ್ತರಿಸಲು ಮತ್ತು 2.00 ಲಕ್ಷ ರೂಪಾಯಿ ವಾರ್ಷಿಕ ಬಾಡಿಗೆ ನಿಗಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
“Karnataka Land Grant Rules, 1969 , ಹಾಗೂ PWD D-code ರ ನಿಯಮಗಳನ್ವಯ ನಿಯತಕಾಲಿಕವಾಗಿ ವಾರ್ಷಿಕ ಬಾಡಿಗೆಯನ್ನು ನಿಗದಿಪಡಿಸಿ, ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಗ್ರಾಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಇವರು ನಡೆಸುತ್ತಿರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಲೀಸ್ ನೀಡಲಾಗಿರುವ ಕರ್ನಾಟಕ ನೀರಾವರಿ ನಿಗಮದ 2.70 ಎಕರೆ ಜಾಗದ ಲೀಸ್ ಅವಧಿಯನ್ನು ದಿನಾಂಕ: 01.04.2023 ರಿಂದ 31.03.2053 ರವರೆಗೆ ವಿಸ್ತರಿಸಲು ಮತ್ತು 2.00 ಲಕ್ಷ ರೂಪಾಯಿ ವಾರ್ಷಿಕ ಬಾಡಿಗೆ ನಿಗಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ಸಚಿವ ಸಂಪುಟದಲ್ಲಿ ಕಳವಳ ವ್ಯಕ್ತವಾಗಿದ್ದು ಸರ್ಕಾರದ ನಿಲುವನ್ನು ಉನ್ನತ ಶಿಕ್ಷಣ ಸಚಿವರು ತಿಳಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
7 ನೇ ವೇತನ ಆಯೋಗದ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಸಚಿವರು ತಿಳಿಸಿದರು.
Key words: decisions , cabinet meeting, Minister, HK Patil