ಮೈಸೂರು,ಡಿಸೆಂಬರ್,10,2020(www.justkannada.in): ಭೂ ಸುಧಾರಣೆ ಕಾಯ್ದೆಗೆ ಬೆಂಬಲ ನೀಡಿದ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ , ಜೆಡಿಎಸ್ ತೆಗೆದು ಬಿಡಿ. ಬಿಜೆಪಿಯ ಬಿ ಟೀಂ ಎಂದು ಘೋಷಣೆ ಮಾಡಿ. ಇಲ್ಲ ಜನ ನಿಮ್ಮನ್ನು ಜೋಕರ್ ಎಂದು ಕರೆಯುತ್ತಾರೆ ಎಂದು ಲೇವಡಿ ಮಾಡಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹಾಗೂ ಹೆಚ್.ಡಿ ದೇವೇಗೌಡರಿಗೆ ಮನವಿ ಮಾಡ್ತೇನೆ. ನಿಮ್ಮ ತತ್ವ ಸಿದ್ದಾಂತವನ್ನು ಜನರಿಗೆ ತಿಳಿಸಿ. ನಿಮ್ಮ ನಿಲುವು ಏನು ? ಮಾತೆತ್ತಿದರೇ ಸಾಲ ಮನ್ನಾ ಬಗ್ಗೆ ಹೇಳುತ್ತೀರಾ. ಆ ಹಣವನ್ನು ನಿಮ್ಮ ಮನೆಯಿಂದ ತಂದರಾ ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಬಿಜೆಪಿ ನಾಯಕರ ಬಗ್ಗೆ ಟೀಕಿಸಿದರೆ ಕುಮಾರಸ್ವಾಮಿ ಉತ್ತರ ಕೊಡುತ್ತಾರೆ. ಕುಮಾರಸ್ವಾಮಿ ಬಿಜೆಪಿಯ ವಕ್ತಾರರಂತೆ ಮಾತನಾಡುತ್ತಿದ್ದಾರೆ. ಜೆಡಿಎಸ್ ತೆಗೆದು ಬಿಡಿ. ಬಿಜೆಪಿಯ ಬಿ ಟೀಂ ಎಂದು ಘೋಷಣೆ ಮಾಡಿ. ಇಲ್ಲ ಜನ ನಿಮ್ಮನ್ನು ಜೋಕರ್ ಎಂದು ಕರೆಯುತ್ತಾರೆ. ದಿನ ಬೆಳಗಾದರೆ ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಅವರನ್ನು ಟೀಕಿಸುತ್ತಿದ್ದಾರೆ. ಜಾತ್ಯಾತೀತ ಪದವನ್ನು ನೀವು ಇನ್ನು ಮುಂದೆ ಬಳಸಬೇಡಿ. ರೈತರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದೀರಾ. ಇದಕ್ಕೆ ಜನರೇ ನಿಮಗೆ ಬುದ್ದಿ ಕಲಿಸುತ್ತಾರೆ ಎಂದು ವಾಗ್ದಾಳಿ ಎಂ ಲಕ್ಷ್ಮಣ್ ನಡೆಸಿದರು.
ಇಲ್ಲೊಬ್ಬ ಏತ್ಲಾಂಡಿ ಕೃಷಿ ಮಂತ್ರಿ ರೈತರನ್ನ ಹೇಡಿಗಳಿಗೆ ಹೊಲಿಸುತ್ತಾರೆ…
ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳಿಕೆ ನೀಡಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ಕಿಡಿಕಾರಿದ ಎಂ. ಲಕ್ಷ್ಮ,ಣ್, ಇಲ್ಲೊಬ್ಬ ಏತ್ಲಾಂಡಿ ಕೃಷಿಮಂತ್ರಿ ರೈತರನ್ನ ಹೇಡಿಗಳಿಗೆ ಹೋಲಿಸುತ್ತಾರೆ. ಇಲ್ಲಿ ತನಕ ಒಬ್ಬ ಬಿಜೆಪಿಯವರು ಇವರ ಹೇಳಿಕೆಯನ್ನ ವಿರೋಧಿಸುತ್ತಿಲ್ಲ. ಹೇಡಿ ಕೆಲಸ ಮಾಡಿದ್ದು ನೀವು. ಪಕ್ಷದ ಚಿಹ್ನೆಯಲ್ಲಿ ಗೆದ್ದು ಪಕ್ಷಕ್ಕೆ ಮೋಸ ಮಾಡಿಹೋದ ನೀವು ಹೇಡಿಗಳು. ಬಾಂಬೆಯಲ್ಲಿ 20 ಕೋಟಿ ಪಡೆದು ಹೋಗಿ ಅವಿತು ಕುಳಿತರಲ್ಲ ನೀವು ಹೇಡಿ. ಯಾರೋ ಒಬ್ಬ ಚಿತ್ರನಟನಿಂದ ಪ್ರತಿಭಟನೆ ಮಾಡೋರನ್ನ ಟೆರರಿಸ್ಟ್ ಗಳೆಂದು ಟ್ವಿಟ್ ಮಾಡಿಸುತ್ತೀರಿ. ನೀವು ಹೇಡಿ ಎಂದು ಬಿಸಿ ಪಾಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಗಳು ರೈತರಿಗೆ ಮತ್ತು ದೇಶಕ್ಕೆ ಮಾರಕವಾಗಿವೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಹೇಳುತ್ತಿರುವ ಕೇಂದ್ರ ಸರ್ಕಾರ ಮಾರಕ ಕೃಷಿ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ಆದಾನಿ ಮತ್ತು ಅಂಬಾನಿ ಮೊದಲಾದ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತರು ಹೋರಾಟ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಮೈ ಕೊರೆಯುವ ಚಳಿಯ ನಡುವೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಚಳಿ ತಡೆಯಲಾಗದೇ ಕೆಲ ರೈತರು ಸಾವನ್ನಪ್ಪಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರ ನೆರವಿಗೆ ಧಾವಿಸಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲೂ ಕೇಂದ್ರ ಸರ್ಕಾರ ಕೇವಲ ಆಶ್ವಾಸನೆ ನೀಡುತ್ತಿದೆ. ನೂತನ ಕೃಷಿ ಕಾಯ್ದೆ ಜಾರಿ ಮೂಲಕ ಕಾನೂನು ರಚಿಸುವ ಬದಲು ದೇಶಾದ್ಯಂತ ಯಾವ ರೈತರು ನ್ಯಾಯಾಲಯದ ಮೆಟ್ಟಿಲೇರುವ ಅವಕಾಶವನ್ನೇ ಕಸಿದುಕೊಳ್ಳಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ
ಶಾಲೆಗಳನ್ನು ತೆರೆಯುವ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆನ್ ಲೈನ್ ಕ್ಲಾಸ್ 1% ಮಕ್ಕಳಿಗೂ ಅನುಕೂಲ ಆಗುತ್ತಿಲ್ಲ. ಇದು 10.11.12ನೇ ತರಗತಿಗಳು ವಿದ್ಯಾರ್ಥಿಗಳಿಗೆ ಜೀವನದ ಮಹತ್ವ ಘಟ್ಟ. ಈ ತರಗತಿಗಳ ಸಿಲಬಸ್‌ಗಳನ್ನ ಕಟ್ ಮಾಡಿ ಪಾಸ್ ಮಾಡಿದ್ರೆ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತೆ. ಸರ್ಕಾರ ಶಾಲೆ ತೆರೆಯದೇ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳನ್ನ ಕತ್ತಲೆಯಲ್ಲಿ ಇಡುವ ಕೆಲಸ ಮಾಡುತ್ತಿದೆ. ತರಗತಿಗಳನ್ನ ಡಿಸೆಂಬರ್ 15 ರೊಳಗೆ ಪ್ರಾರಂಭಮಾಡಿ. ಜೂನ್ ವೇಳೆ ಪರೀಕ್ಷೆ ಮಾಡಿ. ಕೊರೋನಾ ಮುಂಜಾಗ್ರತೆ ಅನುಸರಿಸಿ ಕ್ರಮಕೈಗೊಳ್ಳಿ. ಇಲ್ಲವಾದಲ್ಲಿ ಮುಂದಿನ 4 ಐದು ವರ್ಷ ನಮ್ಮ ರಾಜ್ಯದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಸಲಹೆ ನೀಡಿದರು.
ನಾವು ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ಸು ಪಡೆಯುತ್ತೇವೆ…
ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ನಾವು ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ಸು ಪಡೆಯುತ್ತೇವೆ ಭೂ ಸ್ವಾಧೀನ ಕಾಯ್ದೆಯನ್ನು ವಾಪಸ್ಸು ಪಡೆಯುತ್ತೇವೆ ಕಾರ್ಮಿಕ ವಿರೋಧಿ ಕಾಯ್ದೆ ಸೇರಿ ಬಿಜೆಪಿಯ ಜನ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯುತ್ತೇವೆ ಎಂದರು.
English summary….
KPCC spokesperson asks to declare JDS as BJP’s B team: Expresses displeasure against Agriculture Minister
Mysuru, Dec.10, 2020 (www.justkannada.in): Expressing his displeasure on JDS leaders who supported the Land Reforms Amendment bill, KPCC spokesperson M. Lakshman today said that JDS should be called as the B team of BJP, or else people would call JDS leaders jokers.
Speaking to the media in Mysuru today, he asked former CM H. D. Kumaraswamy and H.D. Devegowda to explain their views to the people. He alleged that HDK was speaking like BJP’s spokesperson. Accusing HDK of speaking against D.K. Shivakumar and Siddaramaiah daily he asked HD Kumaraswamy not to call themselves secular. “You have backstabbed the farmers. People will teach you a lesson,” he said.
Keywords: Land Reforms bill/ KPCC spokesperson M. Lakshmana/ H D Kumaraswamy
Key words: Declare -JDS – BJP- B Team-KPCC spokesperson- M Laxman -mysore