ಬೆಂಗಳೂರು,ಸೆಪ್ಟಂಬರ್,29,2020(www.justkannada.in): ಮೋಟಾರು ವಾಹನ ತೆರಿಗೆ ಇಳಿಕೆ ಮಾಡಿ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಘೋಷಣೆ ಮಾಡಿದ್ದಾರೆ.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಅಧಿನಿಯಮ 1957 ( ಕರ್ನಾಟಕ ಕಾಯ್ದೆ 35/1957) ಕಲಂ 16(1) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ 1957ರ ಷೆಡ್ಯೂಲ್ (ಎ) ಐಟಂ ಸಂಖ್ಯೆ: 5(ಎ)(iii) ರಂತೆ ರಾಜ್ಯದಲ್ಲಿನ 13 ರಿಂದ 20 ಆಸನ ಸಾಮರ್ಥ್ಯವುಳ್ಳ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗದಿಪಡಿಸಿರುವ ರೂ. 900/- ಗಳ ಮೋಟಾರು ವಾಹನ ತೆರಿಗೆಯನ್ನು ರೂ. 700/- ಗಳಿಗೆ ಇಳಿಸಲಾಗಿದೆ ಎಂದು ಡಿಸಿಎಂ ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.
ಮೋಟಾರು ವಾಹನಗಳ ತೆರಿಗೆಯನ್ನು ಇಳಿಸಬೇಕೆಂದು ಹಲವಾರು ವಾಹನ ಮಾಲೀಕರು, ವಿವಿಧ ಸಂಘಟನೆಗಳು ಸಲ್ಲಿಸಿದ್ದ ಬೇಡಿಕೆಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಲಕ್ಷ್ಮಣ್ ಸವದಿ ಅವರು ತಿಳಿಸಿದ್ದಾರೆ.
Key words: Decrease – motor vehicle- tax- DCM -Laxman Savadi.