ಮೈಸೂರು,ಅ,28,2019(www.justkannada.in): ಇಂದು ದೀಪಾವಳಿ ಅಮಾವಾಸ್ಯೆ ಹಿನ್ನೆಲೆ ನಾಡಿನಾದ್ಯಂತ ವಿವಿಧ ದೇಗುಲಗಳಲ್ಲಿ ಸ್ತ್ರೀ ದೇವತೆಗಳಿಗೆ ಧನಲಕ್ಷ್ಮಿ ಅಲಂಕಾರ ಮಾಡಿ ಧನಲಕ್ಷ್ಮಿ ಪೂಜೆ ಸಲ್ಲಿಸಲಾಗುತ್ತಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ಅಮೃತೇಶ್ವರ ದೇಗುಲದಲ್ಲಿರುವ ಶ್ರೀ ಬಾಲಾ ತ್ರಿಪುರಸುಂದರಿ ದೇವಿಯ ಮೂರ್ತಿಗೆ ವಿವಿಧ ಬಗೆಯ ನೋಟುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ದೇವಿಗೆ ವಿವಿಧ ಬಗೆಯ ನೋಟುಗಳು ಹಾಗೂ ನಾಣ್ಯಗಳಿಂದ ಮಾಡಿರುವ ವಿಶೇಷ ಅಲಂಕಾರ ಮಾಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಭಕ್ತರೇ ನೀಡಿರುವ ಸುಮಾರು ಹತ್ತು ಲಕ್ಷ ರೂಪಾಯಿ ನೋಟುಗಳಿಂದ ಅಲಂಕಾರ ಮಾಡಲಾಗಿದೆ. ಇನ್ನು ಶ್ರೀ ಸತ್ಯನಾರಾಯಣಸ್ವಾಮಿ ದೇಗುಲದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ನೆರವೇರಿಕೆ ಮಾಡಲಾಯಿತು. ಧನಲಕ್ಷ್ಮಿ ಪೂಜೆ ಮಾಡಿದರೆ ಐಶ್ವರ್ಯ ವೃದ್ದಿಯಾಗಲಿದೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿ ದೇವರ ವಿಗ್ರಹಗಳಿಗೆ ಮಾಡಿರುವ ವಿಶೇಷ ಅಂಲಂಕಾರವನ್ನ ಭಕ್ತರು ನೋಡಿ ಕಣ್ತುಂಬಿಕೊಂಡು ಪುನೀತರಾದರು.
Key words: deepavali festival-mysore- Notes Decoration-god