ನಾನು ಇನ್ನು ಸೋಲಿನಿಂದ ಆಚೆಗೆ ಬಂದಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ನುಡಿ…

ಮೈಸೂರು,ಜನವರಿ,13,2021(www.justkannada.in): ನಾನು ಇನ್ನು ಸೋಲಿನಿಂದ ಆಚೆಗೆ ಬಂದಿಲ್ಲ. ನಾನು ಚೀಫ್ ಮಿನಿಸ್ಟರ್ ಆಗಿ ಚುನಾವಣೆಗೆ ಸ್ಪರ್ಧಿಸಿದ್ದೆ. ನನ್ನ ಸೋಲು ಸರಿಯೇ.? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಮ್ಮ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಬಗ್ಗೆ ಮತ್ತೆ ಬೇಸರ ವ್ಯಕ್ತಪಡಿಸಿದರು.jk-logo-justkannada-mysore

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ 11 ಗ್ರಾಮಪಂಚಾಯ್ತಿಗಳಲ್ಲಿ ನಮಗೆ ಬಹುಮತ ಇದೆ.  ಉಳಿದ 3 ಪಂಚಾಯ್ತಿಯಲ್ಲಿ ಮಾತ್ರ ನಮಗೆ ಬಹುಮತವಿಲ್ಲ ಅಷ್ಟೇ. ನಮ್ಮ ಸದಸ್ಯರನ್ನ ಸೆಳೆಯುವ ಕೆಲಸವಾಗ್ತಿದೆ. ಹಣದಾಸೆ ತೋರಿಸಿ ನಮ್ಮ ಸದಸ್ಯರ ಸೆಳೆಯುವ ಕೆಲಸ ಮಾಡಲಾಗುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರ ಗ್ರಾ.ಪಂ ಚುನಾವಣೆಯಲ್ಲಿ  13 ಗ್ರಾ.ಪಂ ಗೆಲ್ತೀವಿ ಅಂದುಕೊಂಡಿರಲಿಲ್ಲ ಎಂದರು.

ನಾನು ಇನ್ನು ಸೋಲಿನಿಂದ ಆಚೆಗೆ ಬಂದಿಲ್ಲ.ನಾನು ಚೀಫ್ ಮಿನಿಸ್ಟರ್ ಆಗಿ ಚುನಾವಣೆಗೆ ಸ್ಪರ್ಧಿಸಿದ್ದೆ. ನಾನು ಮುಖ್ಯಮಂತ್ರಿ ಯಾಗಲು ನಿಮ್ಮ ಕೊಡುಗೆ ಇದೆ. ನಾನು ವರುಣ ಕ್ಷೇತ್ರದಲ್ಲೇ ನಿಂತು ಗೆಲ್ತಿದ್ದೆ. ಚುನಾವಣೆ ಪ್ರಾರಂಭಿಸಿ ಅದೇ ಕ್ಷೇತ್ರದಲ್ಲಿ ಕೊನೆಯ ಚುನಾವಣೆ ಸ್ಪರ್ಧಿಸಬೇಕು ಎಂದು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿದ್ದೆ. ಆದರೆ ನನ್ನ ಸೋಲು ಸರಿಯೇ.?  ಎಂದು  ಪ್ರಶ್ನಿಸಿದರು.

defeat-chamundeshwari- constituency -Former CM- Siddaramaiah.
siddaramaih#profile..

ಒಂದು ಕಾಲದಲ್ಲಿ ಜನರೇ ನನಗೆ ದುಡ್ಡು ಕೊಟ್ಟು ಗೆಲ್ಲಿಸಿದರು. ವೀಳ್ಯದೆಲೆ ಮೇಲೆ ಹಣ ಕೊಟ್ಟು ಜನರೇ ನನಗೆ ಚುನಾವಣೆಯಲ್ಲಿ ಗೆಲ್ಲಿಸಿದ್ರು. ಉಳಿದ ಹಣದಲ್ಲಿ ಒಂದು ಮನೆಯನ್ನ ಕಟ್ಟಿಕೊಟ್ಟರು. ಎರಡು ಮನೆ ಕಟ್ಟಿ ಎರಡನ್ನೂ ಮಾರಾಟ ಮಾಡಿದೆ. ಈಗ ಹೊಸ ಮನೆ ಕಟ್ಟುತ್ತಿದ್ದೇನೆ. ಯಾಕಂದರೆ ರಾಜಕಾರಣ ಮುಗಿದ ಮೇಲೆ ಮೈಸೂರಿನಲ್ಲೇ ಉಳಿಬೇಕಲ್ಲ ಅದಕ್ಕೆ ಮೈಸೂರಿನಲ್ಲಿ ಈಗ ಮನೆ ಕಟ್ಟುತ್ತಿದ್ದೇನೆ ಎಂದು ಸಿದ್ಧರಾಮಯ್ಯ ಹೇಳಿದರು.

Key words: defeat-chamundeshwari- constituency -Former CM- Siddaramaiah.