ಚಿಕ್ಕಬಳ್ಳಾಪುರ,ಜೂ,22,2019(www.justkannada.in): ಮೈತ್ರಿ ನಂಬಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೀನಾಯ ಸೋಲಾಯಿತು. ಮೈತ್ರಿ ಇಲ್ಲದಿದ್ದರೇ ನಮಗೆ 15 ಸ್ಥಾನಗಳು ಬರುತ್ತಿದ್ದವು ಎಂದು ಮಾಜಿ ಸಂಸದ ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ವೀರಪ್ಪ ಮೊಯ್ಲಿ, ಮೈತ್ರಿ ನಂಬಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಾಯಿತು. ಜನರ ಭಾವನೆಗಳಿಗೆ ಸರ್ಕಾರ ಸ್ಪಂದಿಸದಿರುವುದು ಸೋಲಿಗೆ ಕಾರಣವಾಯಿತು. ಹೆಚ್.ಡಿ ದೇವೇಗೌಡರು ಹೇಗೆ ಬೇಕಾದರೂ ಮಾತು ಬದಲಾಯಿಸುತ್ತಾರೆ. ಯಾವಶಾಸಕರೂ ಚುನಾವಣೆಗೆ ಹೋಗಲು ರೆಡಿ ಇಲ್ಲ. ಮಧ್ಯಂತರ ಚುನಾವಣೆ ಎದುರಾದರೇ ಜನರು ಸಹಿಸಲ್ಲ ಎಂದರು.
ಲೋಕಸಭೆ ಚುನಾವಣೆಯ ಮೈತ್ರಿ ಸೋಲಿನ ಆತ್ಮಾವಲೋಕನ ಆಗಿಲ್ಲ. ಮೈತ್ರಿ ಇಲ್ಲದಿದ್ದರೇ ರಾಜ್ಯದಲ್ಲಿ 15 ಸೀಟು ಗೆಲ್ಲುತ್ತಿದ್ದವು.. ಸರ್ಕಾರ ಉಳಿಸಿಕೊಳ್ಳಲು ಪಕ್ಷ ಸಂಘಟನೆ ಅಗತ್ಯ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಇನ್ನು ಪ್ರಸ್ತುತ ದೇಶದಲ್ಲಿ ಇವಿಎಂಗಳ ಮೇಲೆ ನಂಬಿಕೆ ಇಲ್ಲದಂತರಾಗಿದೆ. ಇವಿಎಂ ಬಗ್ಗೆ ಇರುವ ಅನುಮಾನ ನಿವಾರಿಸಲೂ ಸಂಶೋಧನೆ ಅಗತ್ಯವಾಗಿದೆ ಎಂದ ವೀರಪ್ಪ ಮೊಯ್ಲಿ, ಯಡಿಯೂರಪ್ಪ ಮತ್ತೆ ಸಿಎಂ ಆಗಲು ಹಗಲು ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.
key words: Defeat -Congress –alliance-Former MP -Veerappa Moily