ಮೈಸೂರು,ಫೆ,1,2020(www.justkannada.in): ಇಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ರಕ್ಷಣಾ ಇಲಾಖೆಗೆ ಯಾವುದೇ ಆದ್ಯತೆ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
ಬಜೆಟ್ ಬಗ್ಗೆ ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಮ್ಮ ಅಕ್ಕಪಕ್ಕದ ದೇಶಗಳು ಫ್ರೇಂಡ್ಲಿ ದೇಶಗಳಲ್ಲ. ಪಾಕಿಸ್ತಾನವಾಗಲಿ ಚೈನಾ ಆಗಲಿ ನಮ್ಮ ಸ್ನೇಹಿತರಂತೆ ಇಲ್ಲ. ಈಗ ಬಾಂಗ್ಲ ಹಾಗೂ ಅಫ್ಘಾನಿಸ್ತಾನ ಸೇರಿಕೊಂಡಿವೆ. ಆದ್ರೂ ರಕ್ಷಣಾ ಇಲಾಖೆಗೆ ಯಾವುದೇ ಆದ್ಯತೆ ಇಲ್ಲ. ನಮ್ಮ ರಕ್ಷಣಾ ವ್ಯವಸ್ಥೆಗೆ ಹೆಚ್ಚು ಹಣ ಇಟ್ಟಿದ್ದರೆ ಅಕ್ಕಪಕ್ಕದ ದೇಶಗಳು ಎಚ್ಚರಿಕೆಯಿಂದ ಇರುತ್ತಿದ್ದವು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಸುಮ್ಮನೆ ದೇಶವನ್ನ ಸುಭದ್ರವಾಗಿ ಇಡ್ತಿವಿ ಅಂತಾರೆ. ಆದರೆ ಬಜೆಟ್ನಲ್ಲಿ ರಕ್ಷಣಾ ಇಲಾಖೆಗೂ ಮಹತ್ವ ನೀಡಿಲ್ಲ ಎಂದು ಸಿದ್ಧರಾಮಯ್ಯ ಟೀಕಿಸಿದರು.
Key words: Defense Department – no priority – budget-mysore-Former CM Siddaramaiah