ಬೆಂಗಳೂರು,ಫೆಬ್ರವರಿ,5,2021(www.justkannada.in): ಏರ್ ಶೋ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮೂರು ದಿನಗಳ ಕಾಲ ನಡೆದ ಏರ್ ಶೋ2021 ಇಂದು ಮುಕ್ತಾಯವಾಯಿತು. ಏರ್ ಶೋ ಸಮರೋಪ ಸಮಾರಂಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, 2021ರ ಎರ್ ಶೋ ಯಶಸ್ವಿಯಾಗಿದ್ದು, ಭಾರತದ ರಕ್ಷಣಾ ಸಾಮರ್ಥ್ಯ ವೃದ್ಧಿಗೆ ಏರ್ ಶೋ ಸಹಕಾರಿಯಾಗಿದೆ. ಇನ್ನು 5 ಲಕ್ಷಕ್ಕೂ ಹೆಚ್ಚು ಜನ ಏರ್ ಶೋ ವೀಕ್ಷಣೆ ಮಾಡಿದ್ದಾರೆ. 120 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಏರ್ ಶೋದಲ್ಲಿ 203 ಕೋಟಿ ಮೊತ್ತದ ವಹಿವಾಟು ಆಗಿದೆ. ಈ ರೀತಿಯ ಏರ್ ಶೋಗಳಿಂದ ಭಾರತೀಯ ರಕ್ಷಣಾ ಸಾಮರ್ಥ್ಯ ಹೆಚ್ಚಳವಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
Key words: Defense Minister -Rajanath Singh – air show- defense -capacity