ನವದೆಹಲಿ,ಫೆ,11,2020(www.justkannada.in): ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ ಆದ್ಮಿ ಪಕ್ಷ ಈ ಭಾರಿಯೂ ಭರ್ಜರಿ ಬಹುಮತ ಪಡೆದು ಅಧಿಕಾರ ಉಳಿಸಿಕೊಂಡಿದೆ.
ದೆಹಲಿ ವಿಧಾನಸಭೆಯ 70 ಕ್ಷೇತ್ರಗಳ ಪೈಕಿ 63 ಕ್ಷೇತ್ರಗಳಲ್ಲಿ ಆಪ್ ಗೆದ್ದುಬೀಗಿದರೇ ಬಿಜೆಪಿ 7 ಸ್ಥಾನಕಷ್ಟೇ ತೃಪ್ತಿಪಟ್ಟಿಕೊಂಡಿದೆ. ಇನ್ನು ಕಾಂಗ್ರೆಸ್ ಶೂನ್ಯ ಸುತ್ತಿದೆ. ಆಪ್ ಗೆಲುವು ಹಿನ್ನೆಲೆ ದೆಹಲಿಯಲ್ಲಿ ಅಪ್ ಕಾರ್ಯಕರ್ತರ ಸಂಭ್ರಮ ಜೋರಾಗಿದೆ.
ಈ ನಡುವೆ ಗೆಲುವು ಸಾಧಿಸಿದ ಬಳಿಕ ಅಪ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಇದು ಕೇಜ್ರಿವಾಲ್ ಗೆಲುವಲ್ಲ. ದೆಹಲಿ ಜನತೆಯ ಗೆಲುವು. ಮತ್ತೆ ನಮಗೆ ಜನಾದೇಶ ನೀಡಿದ್ದಕ್ಕೆ ಧನ್ಯವಾದಗಳು ಎಂದು ಅಭಿನಂದನೆ ಸಲ್ಲಿಸಿದರು.
ಹಾಗಯೇ ದೆಹಲಿ ಜನತೆ ಈಗ ಒಂದು ಸಂದೇಶ ಸಾರಿದ್ದಾರೆ. ಸರ್ಕಾರಿ ಶಾಲೆ ಆಸ್ಪತ್ರೆ ಕುಡಿಯುವ ನೀರು. ವಿದ್ಯುತ್ ,ರಸ್ತೆ ಕೊಡುವವರಿಗೆ ಮತ ಹಾಕಿದ್ದಾರೆ. ಇದು ಇಡಿ ದೇಶದ ಜನತೆಯ ಗೆಲುವಾಗಿದೆ. ಮುಂದಿನ 5 ವರ್ಷ ಇದೇ ರೀತಿ ಸಾಗುತ್ತೇವೆ. ದೆಹಲಿ ಜನತೆ ಆಶಯದಂತೆ ಕೆಲಸ ಮಾಡುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ಸಂತಸ ವ್ಯಕ್ತಪಡಿಸಿದರು.
Key words: delhi-AAP- chief -Arvind Kejriwal – victory – Delhi people