ನವದೆಹಲಿ,ಡಿಸೆಂಬರ್,7,2020(www.justkannada.in): ಕೇಂದ್ರ ಕೃಷಿ ಸುಧಾರಣಾ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಬೆಂಬಲ ನೀಡಿದ್ದಾರೆ.
ಇಂದು ರೈತರ ಪ್ರತಿಭಟನಾ ಸ್ಥಳಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ನಂತರ ಮಾತನಾಡಿದ ಅರವಿಂದ ಕೇಜ್ರಿವಾಲ್, ರೈತರ ಸಮಸ್ಯೆಗಳು ಮತ್ತು ಅವರಿಟ್ಟಿರುವ ಬೇಡಿಕೆ ಒಪ್ಪುವಂಥದ್ದು. ನಾವು ಅದನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಶಾಸಕರು, ನಾಯಕರು ಸೇವಕರಾಗಿ ರೈತರ ಸೇವೆ ಮಾಡುತ್ತಿದ್ದಾರೆ. ನಾನಿಲ್ಲಿಗೆ ಮುಖ್ಯಮಂತ್ರಿಯಾಗಿ ಬಂದಿಲ್ಲ. ಸೇವಕನಾಗಿ ಬಂದಿದ್ದೇನೆ. ರೈತರು ಇಂದು ಸಂಕಷ್ಟದಲ್ಲಿದ್ದು, ನಾವು ಅವರ ಜತೆ ನಿಲ್ಲಬೇಕು. ಡಿಸೆಂಬರ್ 8ರ ಬಂದ್ಗೆ ಎಎಪಿ ಬೆಂಬಲ ನೀಡಿದೆ. ಪಕ್ಷದ ಕಾರ್ಯಕರ್ತರು ದೇಶದಾದ್ಯಂತ ಬಂದ್ ಆಚರಿಸಲಿದ್ದಾರೆ’ ಎಂದೂ ದೆಹಲಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.
Key words: Delhi CM -Arvind Kejriwal- supports –farmers-fight-bharath bandh