ಬೆಂಗಳೂರು,ಜನವರಿ,02,2021(www.justkannada.in) : ಪ್ರತಿಭಟನಾನಿರತ ರೈತರು ದೆಹಲಿ ಪ್ರವೇಶಿಸದಂತೆ ಸಿಮೆಂಟ್ ಸುರಿದು ಬ್ಯಾರಿಕೇಡ್ ಗಳನ್ನು ಹಾಕಿ ಭದ್ರಕೋಟೆ ನಿರ್ಮಿಸಿರುವ ಪೊಲೀಸರ ಕ್ರಮ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ರೈತರ ಆಗಮನ ತಡೆಯಲು ಗೋಡೆಗಳ ನಿರ್ಮಿಸುವ ಬದಲಿಗೆ, ಸೇತುವೆಗಳನ್ನು ನಿರ್ಮಿಸಿ ಎಂದು ಹೇಳಿದ್ದಾರೆ.
ಟಿಕ್ರಿ, ಘಾಜಿಪುರ ಹಾಗೂ ಸಿಂಘೂ ಗಡಿಗಳಿಗೆ ಭಾರೀ ಪ್ರಮಾಣದಲ್ಲಿ ಹರಿದುಬರುತ್ತಿರುವ ರೈತರ ತಡೆಗಾಗಿ ರೈತರು ಒಳ ಪ್ರವೇಶಿಸಿದಂತೆ ರಸ್ತೆಗಳಿಗೆ ಗೋಡೆಗಳನ್ನು ನಿರ್ಮಿಸಲಾಗಿದೆ ಎಂದು ಕಿಡಿಕಾರಿದರು.
ಕ್ರೇನ್ ಮೂಲಕ ರಸ್ತೆಗಳನ್ನು ಅಗೆದು ಗ್ರಿಲ್ ಹಾಗೂ ಮೊಳೆಗಳನ್ನು ಸಿಮೆಂಟ್ ಮೂಲಕ ರಸ್ತೆಗೆ ಜೋಡಿಸಲಾಗಿದೆ. ಇನ್ನು ಬ್ಯಾರಿಕೇಡ್ ಗಳನ್ನು ಅಳವಡಿಸಿ, ಇದು ಭದ್ರವಾಗಿ ನಿಲ್ಲುವ ಸಲುವಾಗಿ ಕಾಂಕ್ರೀಟ್ ಸುರಿದು ಗಟ್ಟಿ ಮಾಡಿ, ತಡೆಗಳನ್ನು ನಿರ್ಮಿಸಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
key words : Delhi-farmers-protest-walls-Instead-Build-Bridges-Rahul Gandhi-Advice