ಮೈಸೂರಿನಲ್ಲಿ ಒಬ್ಬರಿಗೆ ಡೆಲ್ಟಾ ಪ್ಲಸ್ ವೈರಸ್ ಪತ್ತೆ-ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ.

ಬೆಂಗಳೂರು,ಜೂನ್,23,2021(www.justkannada.in): ಮೈಸೂರಿನಲ್ಲಿ ಒಬ್ಬರಿಗೆ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.jk

ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾದ ವ್ಯಕ್ತಿಯಲ್ಲಿ ಯಾವುದೇ ರೋಗ ಲಕ್ಷ್ಮಣ ಇಲ್ಲ. ಸೋಂಕಿತನ ಸಂಪರ್ಕದಿಂದ ಇದು ಬಂದಿಲ್ಲ. ಡೆಲ್ಟಾ ಪ್ಲಸ್ ವೈರಸ್ ಸೂಕ್ಷ್ಮವಾಗಿ ಗಮನಿಸಿದ್ದೇವೆ. ವೈರಸ್ ಪತ್ತೆಗೆ ಕರ್ನಾಟಕದಲ್ಲಿ 6 ಕಡೆ ಲ್ಯಾಬ್ ತೆರೆಯುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ  2 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣವಾಗಿದೆ. ರಾಜ್ಯದ ಈ ಸಾಧನೆಗೆ ಕಾರಣರಾದ ಆರೋಗ್ಯ ಸಿಬ್ಬಂದಿ, ನರ್ಸ್ ಮತ್ತು ಜನರಿಗೆ ಧನ್ಯವಾದ ಅರ್ಪಿಸುತ್ತೇನೆ  ಎಂದು ಸಚಿವ ಸುಧಾಕರ್ ತಿಳಿಸಿದರು.

ENGLISH SUMMARY…

Health Minister Dr. K. Sudhakar clarifies on reporting of one Delta Plus case in Mysuru
Bengaluru, June 23, 2021 (www. justkannada.in): Health and Medical Education Minister of Karnataka Dr. K. Sudhakar today confirmed that one Delta Plus virus (COVID-19 variant) has been reported in Mysuru.
He informed that it was an asymptomatic case and he has not developed the infection from another infected person. “We are closely watching the spread of the Delta Plus virus. We are opening laboratories at six places to diagnose Delta virus,” he added.
On the occasion, he also informed that 2 crore doses of the vaccination has been given in the state and thanked all the health workers.
Keywords: Health Minister/ Dr. K. Sudhakar/ confirms one case Delta Plus virus/ in Mysuru

Key words: Delta Plus- virus- detection – Mysore-Health Minister -Dr K Sudhakar