ಮೈಸೂರು,ಜೂನ್,23,2021(www.justkannada.in): ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ವೈರಸ್ ಕಾಣಿಸಿಕೊಂಡ ವಿಚಾರ ಸಂಬಂಧ ಇದರಿಂದ ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಮೈಸೂರು ಡಿಹೆಚ್.ಒ ಪ್ರಸಾದ್ ತಿಳಿಸಿದರು.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಎಚ್ ಒ ಪ್ರಸಾದ್, ಮೇ 2 ರಂದು ಸ್ಯಾಂಪಲ್ ಕೊಟ್ಟು ಮೇ 4 ರಂದು ಕೊರೊನಾ ದೃಢ ಆಗಿತ್ತು. ಆತ ಈಗ ಸಂಪೂರ್ಣ ಗುಣಮುಖ ಆಗಿದ್ದಾನೆ. ಪ್ರತಿ ತಿಂಗಳು ಜಿಲ್ಲೆಯಿಂದ 40 ಸ್ಯಾಪ್ ಕಳುಹಿಸಲಾಗುತ್ತೆ. ರ್ಯಾಂಡಮ್ ಆಗಿ ಕಳುಹಿಸಿದ 40 ಸ್ಯಾಂಪಲ್ ನಲ್ಲಿ ಒಂದು ಡೆಲ್ಟಾ ಫ್ಲಸ್ ಸೋಂಕು ಇರೋದು ಗೊತ್ತಾಗಿದೆ. ನಾವು ತಕ್ಷಣ ಕಾರ್ಯಪ್ರವೃತ್ತರಾದೆವು. ಪ್ರಥಮ ಹಾಗೂ ಸೆಕೆಂಡರಿ ಸಂಪರ್ಕಿತರ ನಿಗಾ ವಹಿಸಲಾಗಿದೆ. ಯಾವುದೇ ಆತಂಕ ಇಲ್ಲ. ಹೆಚ್ಚು ಹರಡುವಿಕೆಯ ಲಕ್ಷಣ ಇರುವುದರಿಂದ ಮತ್ತಷ್ಟು ಎಚ್ಚರಿಕೆ ವಹಿಸಬೇಕು ಎಂದರು.
ಚೆಲುವಾಂಬ ಆಸ್ಪತ್ರೆ ಅಧೀಕ್ಷಕಿ ಸುಧಾರುದ್ರಪ್ಪ ಮಾತನಾಡಿ, ಡೆಲ್ಟಾ ಪ್ಲಸ್ ಮಕ್ಕಳಿಗೂ ಕಾಡುವ ಸಮಸ್ಯೆ. ಹಾಗಾಗಿ ಮಕ್ಕಳನ್ನ ಪೋಷಕರು ಹೆಚ್ಚಿನ ನಿಗಾ ವಹಿಸವೇಕು. ಈ ಡೆಲ್ಟಾ ವಯಸ್ಸಿನ ಅಂತರವಿಲ್ಲದೆ ಬರಲಿದೆ.ಮಕ್ಕಳಿಗೆ ಅನಗತ್ಯವಾಗಿ ಹೊರಗೆ ಬರದಿರುವಂತೆ ನಿಗಾ ವಹಿಸಿ ಎಂದು ಎಚ್ಚರಿಕೆ ನೀಡಿದರು.
Key words: Delta Plus-Virus –Mysore-no worry- DHO -Prasad.