ಮೈಸೂರು,ಫೆಬ್ರವರಿ,24,2024(www.justkannada.in): ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕ್ಷೇತ್ರದಲ್ಲಿ ಫುಲ್ ಆಕ್ಟಿವ್ ಆಗುತ್ತಿದ್ದು ಇಂದು ಲೋಕಸಭಾ ಚುನಾವಣೆ ಸಂಬಂಧ ಸಂವಾದ ಕಾರ್ಯಕ್ರಮ ನಡೆಸಿದ್ದಾರೆ.
ಮೈಸೂರು ವಿಪ್ರ ಬಳಗ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ರಾವ್ ಅವರು ಸಂವಾದ ಕಾರ್ಯಕ್ರಮ ನಡೆಸಿದರು. ಮೈಸೂರಿನ ಚಾಮುಂಡಿಪುರಂ ನಲ್ಲಿರುವ ಆರಾಧ್ಯ ಮಹಾಸಭಾ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಸ್ಕರ್ ರಾವ್ ಅವರ ‘ನಿಮ್ಮ ಭಾಸ್ಕರ್ ರಾವ್’ ಎಂಬ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಇದೇ ಸಂಧರ್ಭದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ನೀಡಬೇಕೆಂದು ವಿಪ್ರರೆಲ್ಲರೂ ಸೇರಿ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಭಾಸ್ಕರ್ ರಾವ್, 34 ವರ್ಷ ನಾನು ಸರ್ಕಾರಿ ಸೇವೆ ಸಲ್ಲಿಸಿದ್ದೇನೆ. ಮೈಸೂರು, ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಸೇರಿದಂತೆ ಎಲ್ಲಾ ಕಡೆ ಸೇವೆ ಸಲ್ಲಿಸಿದ್ದೇನೆ. ನನ್ನ ಅವಧಿಯಲ್ಲಿ ಯಾವುದೇ ಯಾವುದೇ ಗಲಭೆಯಲ್ಲಿ ರಕ್ತ ಕ್ರಾಂತಿ ಆಗದಂತೆ ಸೇವೆ ಸಲ್ಲಿಸಿದ್ದೇನೆ. 34ವರ್ಷ ಯಾವುದೇ ಕಳಂಕವಿಲ್ಲದೆ ಸೇವೆ ಸಲ್ಲಿಸಿದ್ದೇನೆ. ನಮಗೆ ಸನಾತನ ಧರ್ಮ, ದೇಶ ತುಂಬಾ ಮುಖ್ಯ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂದೆ ಸಾಗೋಣ.ನೀವೆಲ್ಲರೂ ನನಗೆ ಆಶೀರ್ವಾದ ಮಾಡಿ. ನಾನು ಯಾರ ಬಗ್ಗೆಯೂ ಮಾತನಾಡಲ್ಲ, ವಿರುದ್ಧವಾಗಿಯೂ ಮಾತನಾಡಲ್ಲ. ನಮ್ಮ ಸೇವೆ ನಮ್ಮ ಕೆಲಸ ನಾವು ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿಎಂ. ಎಸ್. ರವೀಂದ್ರ, ಹೆಚ್. ಅಶ್ವತ ನಾರಾಯಣ, ವಿ. ಸುದರ್ಶನ್, ಸಿ. ಎಸ್. ಚಂದ್ರಶೇಖರ್, ನಾಗರಾಜರಾವ್, ಹೆಚ್. ಎ. ವಿಜಯಕುಮಾರ್, ಆರ್. ಸುಂದರ ಮೂರ್ತಿ, ವಿ. ಸುರೇಶ್, ಆರ್. ಎಸ್. ಸತ್ಯನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Key words: Demand – BJP ticket -Mysore-Kodagu constituency – retired IPS officer -Bhaskar Rao.