ಮೈಸೂರು, ಡಿಸೆಂಬರ್,4,2024 (www.justkannada.in): ತನ್ನ ಜೊತೆಯಲ್ಲಿದ್ದವರ ಪ್ರಾಣ ರಕ್ಷಿಸಲು ಮದ ಬಂದ ಕಾಡಾನೆಯೊಂದಿಗೆ ವೀರಾವೇಶದಿಂದ ಹೋರಾಡಿ ತನ್ನ ಪ್ರಾಣವನ್ನೇ ಅರ್ಪಿಸಿದ ಅರ್ಜುನ ಆನೆಗೆ ಹುತಾತ್ಮ ಪಟ್ಟ ನೀಡುವುದರೊಂದಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಆಗ್ರಹಿಸಲಾಯಿತು.
ಅರ್ಜುನನ ಬಲಿದಾನವಾಗಿ ಡಿಸೆಂಬರ್ 4ಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರು ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿಆಯೋಜನೆಯಾಗಿದ್ದ ‘‘ಅರ್ಜುನ ಮರೆಯುವುದೆಂತು ನಿನ್ನ’’ ಕಾರ್ಯಕ್ರಮದಲ್ಲಿಈ ಕುರಿತು ಸರಕಾರವನ್ನು ಒತ್ತಾಯಿಸಲಾಯಿತು.
ಕಾಡಾನೆ ಸೆರೆ ಕಾರ್ಯಚರಣೆ ಕೈ ಬಿಟ್ಟು ಹಿಂತಿರುಗುತ್ತಿದ್ದಾಗ ದಿಢೀರಾಗಿ ಮದ ಬಂದ ಕಾಡಾನೆ ದಾಳಿ ಮಾಡಿದೆ. ಈ ಸಂದರ್ಭ ಅಕಾಸ್ಮಿಕವಾಗಿ ಅರಿವಳಿಕೆ ತಗುಲಿ ಪ್ರಜ್ಞೆ ತಪ್ಪಿದ ಪ್ರಶಾಂತ ಆನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿತ್ತು. ಕಾಡಾನೆ ದಾಳಿಯಿಂದ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಈ ಸಂದರ್ಭ ಅರ್ಜುನ ಆನೆ ಏಕಾಂಗಿಯಾಗಿ ಹೋರಾಡಿ ಎಲ್ಲರ ಜೀವ ಉಳಿಸಿದೆ. ಸಿಬ್ಬಂದಿ, ಅಧಿಕಾರಿಗಳು ಸೇವೆಯ ಸಂದರ್ಭ ಕೊನೆಯುಸಿರೆಳೆದರೆ ಅವರಿಗೆ ಹುತಾತ್ಮ ಪಟ್ಟ ನೀಡಲಾಗುತ್ತಿದೆ. ಅರ್ಜುನ ಕೂಡ ಸರಕಾರಿ ನೌಕರ. ಆದರೆ, ಆತನಿಗೆ ಹುತಾತ್ಮ ಪಟ್ಟ ನೀಡುವುದಿರಲಿ, ಆತನ ವರ್ಷದ ನೆನಪು ಕೂಡ ಆಚರಿಸದೆ ಇಲಾಖೆ ಹಾಗೂ ಸರಕಾರ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನೆಲೆಯಲ್ಲಿಅರ್ಜುನನಿಗೆ ಹುತಾತ್ಮ ಪಟ್ಟ ನೀಡಿ, ಅರಣ್ಯ ಇಲಾಖೆಯ ಹುತಾತ್ಮತರ ದಿನ ಆತನ ಹೆಸರನ್ನು ಕೂಡ ಓದಬೇಕು. ಮೈಸೂರಿನಲ್ಲಿಅರ್ಜುನನ ಸ್ಮಾರಕ ನಿರ್ಮಾಣ ಮಾಡಬೇಕು. ಬೀದಿಯೊಂದಕ್ಕೆ ಅಥವಾ ಅರಮನೆಯ ಭಾಗದಲ್ಲಿಅರ್ಜುನನ ಹೆಸರು ಇಡಬೇಕು. ಕಾಡಾನೆ ಸೆರೆ ಕಾರ್ಯಾಚರಣೆಯ ಹಳೆಯ ವಿಧಾನವನ್ನು ಬದಲಯಿಸಿ ವೈಜ್ಞಾನಿಕವಾಗಿ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಸಭೀಕರ ಪರವಾಗಿ ಮೈಸೂರು ಕಲ್ಚರಲ್ ಅಸೋಸಿಯೇಶನ್‌ನ ಸಂಚಾಲಕ ಐತಿಚಂಡ ರಮೇಶ್ ಉತ್ತಪ್ಪ ನಿರ್ಣಯ ಮಂಡಿಸಿದರು.
ಮೈಸೂರು ಕಲ್ಚವರಲ್ ಅಸೋಸಿಯೇಷನ್ ಅಧ್ಯಕ್ಷ ಎ.ಪಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಐಎಫ್‌ಎಸ್ ಅಧಿಕಾರಿ ಟಿ. ಬಾಲಚಂದ್ರ, ‘‘ದೇಶದ ಯಾವುದೇ ರಾಜ್ಯದಲ್ಲಿ ಹುಲಿ, ಆನೆ ಬಂದರೆ ಕರ್ನಾಟಕ ಸಂಪರ್ಕಿಸುತ್ತಾರೆ. ಬೇರೆ ರಾಜ್ಯಗಳಿಗೆ ಆನೆಗಳನ್ನು ಕೊಟ್ಟ ಹೆಗ್ಗಳಿಕೆ ನಮಗಿದೆ. ಅಂತೆಯೆ ನಮ್ಮಲ್ಲಿ ಸರಕಾರಿ ಸಿಬ್ಬಂದಿಯಂತೆ ಪ್ರತೀ ಆನೆಗೆ ಸರ್ವಿಸ್ ರೆಕಾರ್ಡ್ ನಿರ್ವಹಣೆ ಮಾಡಲಾಗುತ್ತದೆ. ನಿವೃತ್ತಿ ನಂತರ ಪಿಂಚಿಣಿ ಕೊಡುವ ವ್ಯವಸ್ಥೆ ಇದೆ. ಇದೇ ರೀತಿ ಸೇವೆಯಲ್ಲಿಮೃತಪಟ್ಟ ಅರ್ಜುನನಿಗೆ ಹುತಾತ್ಮ ಪಟ್ಟ ನೀಡುವುದು ಸಮಂಜಸ,’’ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆನೆ ಡಾಕ್ಟರ್ ಎಂದೇ ಪ್ರಸಿದ್ದಿಯಾದ ಪಶುವೈದ್ಯಾಧಿಕಾರಿ ಡಾ. ನಾಗರಾಜ್, ‘‘ಅರಣ್ಯ ಇಲಾಖೆಯ ನನ್ನ 21 ವರ್ಷ ಸೇವೆಯಲ್ಲಿ85 ಆನೆ ಸೆರೆ ಕಾರ್ಯದಲ್ಲಿಭಾಗಿಯಾಗಿದ್ದೇನೆ. ಅದರಲ್ಲಿ2014 ರಲ್ಲಿಹಾಸನ ಜಿಲ್ಲೆಯಲ್ಲಿಒಂದೇ ವರ್ಷದಲ್ಲಿ22 ಆನೆ ಸೆರೆಹಿಡಿಯಲಾಗಿದೆ. ಈ ಎಲ್ಲಾಕಾರ್ಯಚರಣೆಗಳನ್ನು ನಿರ್ಭಯದಿಂದ ಕೈಗೊಳ್ಳಲು ಬೆನ್ನೆಲುಬಾಗಿ ಅರ್ಜುನ ಆನೆ ನಿಂತಿದ್ದ. 2012 ರಲ್ಲಿಬಲರಾಮ ಬದಲಿಗೆ ಅರ್ಜುನನ್ನು ಅಂಬಾರಿ ಆನೆಯಾಗಿ ಆಯ್ಕೆ ಮಾಡಿದ್ದೆ ರೋಚಕ ಕಥೆಯಾಗಿದೆ. ಮುಂಗೋಪಿಯಾಗಿದ್ದ ಆತನನ್ನು ಮೈಕಟ್ಟು, ಅಣೆ, ರಾಜ ನಡಿಗೆಯಿಂದ ಮನಸೋತು ಆತನನ್ನು ಅಂಬಾರಿ ಆನೆಯಾಗಿ ಆಯ್ಕೆ ಮಾಡಲಾಯಿತು,’’ ಎಂದು ಸ್ಮರಿಸಿದರು. ಅರ್ಜುನನ ಮಾವುತರಾಗಿದ್ದ ದೊಡ್ಡಮಾಸ್ತಿ ಅವರ ಮಗ ಮಹೇಶ್ ಅವರನ್ನೂ ಸನ್ಮಾಸಿಲಾಯಿತು.
ಆನೆ ಸೇವಕರಿಗೆ ಸನ್ಮಾನ :
ಮೈಸೂರು ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಅರ್ಜುನ ಆನೆಯ ವರ್ಷದ ನೆನಪು ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿಪಶುವೈದ್ಯಾಧಿಕಾರಿ ಡಾ. ನಾಗರಾಜ್ ಹಾಗೂ ಅರ್ಜುನನ ಕಾವಾಡಿ ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ನಗರಾಧ್ಯಕ್ಷ ಕೆ.ಎಸ್. ಶಿವರಾಮ್ ಉಪಸ್ಥಿತರಿದ್ದರು.
Key words: Demand, build, monument, Arjuna, elephant