ಬೆಳಗಾವಿ,ಡಿಸೆಂಬರ್,27,2022(www.justkannada.in): ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣಸೌಧದ ಬಳಿ ವಕೀಲರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಕೀಲರು ಸ್ಥಳಕ್ಕೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಬರುವಂತೆ ಪಟ್ಟು ಹಿಡಿದು ಕಾನೂನು ಸಚಿವರಿಗೆ ಧಿಕ್ಕಾರ ಕೂಗಿದರು. ಹಾಗೆಯೇ ಪೊಲೀಸ್ ಭದ್ರತೆ ನಡುವೆ ಬ್ಯಾರಿಕೇಡ್ ತಳ್ಳಿ ಸುವರ್ಣಸೌಧದ ಬಳಿ ನುಗ್ಗಲು ಯತ್ನಿಸಿದರು.
ಈ ವೇಳೆ ಪೊಲೀಸರು ಮತ್ತು ವಕೀಲರ ನಡುವೆ ವಾಗ್ವಾದ ನಡೆದು ಹೈಡ್ರಾಮಾವೇ ಸೃಷ್ಠಿಯಾಯಿತು. ಪ್ರತಿಭಟನೆ ಹಿನ್ನೆಲೆ ರಾಷ್ಟ್ರೀಯ ಹೆದ್ಧಾರಿ 4ರಲ್ಲಿ ಸಂಚಾರ ಸ್ಥಗಿತಗೊಂಡಿತು. ಸ್ಥಳಕ್ಕಾಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ವಕೀಲರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ನನ್ನದು. ವಕೀಲರ ರಕ್ಷಣೆಗಾಗಿ ಬಿಲ್ ಮಂಡನೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಸಚಿವ ಅಶೋಕ್ ಮನವಿಗೆ ಮಣಿದು ವಕೀಲರು ಪ್ರತಿಭಟನೆ ಕೈಬಿಟ್ಟರು.
Key words: Demand – implementation – Lawyers Protection Act-Protest