ಪೆಟ್ರೋಲ್, ಡೀಸೆಲ್ ಹಾಲಿನ ದರ ಏರಿಕೆ ಬೆನ್ನಲ್ಲೆ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಒತ್ತಾಯ

ಬೆಂಗಳೂರು, ಜೂನ್, 25,2024 (www.justkannada.in): ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್  ಹಾಗೂ ಹಾಲಿನ ದರ ಏರಿಕೆಯಾಗಿದ್ದು ಈ ಬೆನ್ನಲ್ಲೆ ಇದೀಗ ಆಟೋ ಪ್ರಯಾಣ ದರ ಹೆಚ್ಚಳ ಮಾಡುವಂತೆ ಆಟೋ ಚಾಲಕರ ಸಂಘ ಒತ್ತಾಯಿಸಿದೆ.

ಹೌದು ಇತ್ತೀಚೆಗೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ಹಾಲಿನ ದರ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಟೋ ಚಾಲಕರ ಸಂಘ ಮನವಿ ಮಾಡಿದೆ.

ಬೆಲೆ ಏರಿಕೆ ಬಿಸಿಯಿಂದ ಆಟೋ ಚಾಲಕರು ಆರ್ಥಿಕ ಸಂಕಷ್ಟದಲ್ಲಿದ್ದು, ಹೀಗಾಗಿ ಪ್ರಯಾಣ ದರ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘಟನೆಗಳು ಒತ್ತಾಯ ಮಾಡುತ್ತಿದೆ.

ಈ ಕುರಿತು ಮಾತನಾಡಿದ ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ‘ಮೂರು ವರ್ಷಗಳಿಂದ ಪ್ರಯಾಣ ದರ ಏರಿಕೆಯಾಗದ ಹಿನ್ನೆಲೆ‌ ಕನಿಷ್ಠ ಆಟೋ ದರವನ್ನು 30 ರೂಪಾಯಿಯಿಂದ 40 ರೂಪಾಯಿಗೆ ಹೆಚ್ಚಿಸುವಂತೆ ಆಟೋ ಸಂಘಟನೆಗಳು ಒತ್ತಾಯಿಸಿದೆ. ಈಗಾಗಲೇ ಓಲಾ, ಉಬರ್ ​ಗಳಲ್ಲಿ ಮಿನಿಮಮ್ ಚಾರ್ಚ್ 50 ರೂಪಾಯಿ ಇದೆ. ಆಟೋ ದರ ಪರಿಷ್ಕರಣೆಯಾಗಿ ಎರಡುವರೆ ವರ್ಷ ಕಳೆದಿದೆ. 2021ರ ಡಿಸೆಂಬರ್ 20ರಂದು ಆಟೋ ದರ ಪರಿಷ್ಕರಿಸಲಾಗಿತ್ತು. ನಂತರ ಪರಿಷ್ಕರಣೆ ಮಾಡಿಲ್ಲ ಎಂದು ತಿಳಿಸಿದರು.

Key words: Demand, increase, auto, fares