ಬೆಂಗಳೂರು,ಜುಲೈ,3,2023(www.justkannada.in): ಸಿಎಂ ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗುತ್ತಿದೆ. ಶಾಸಕರು ಶಿಫಾರಸು ಪತ್ರ ತಂದ್ರೆ 30 ಲಕ್ಷ ದುಡ್ಡು ತನ್ನಿ ಅಂತಾರಂತೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶಾಸಕರು ಶಿಫಾರಸು ಪತ್ರ ತಂದ್ರೆ, ಶಿಫಾರಸು ಪತ್ರ ಸಾಲದು 30 ಲಕ್ಷ ದುಡ್ಡು ತನ್ನಿ ಅಂತಾರಂತೆ. 30 ಲಕ್ಷ ಕೊಡದಿದ್ದರೇ ಕೆಲಸವೇ ಆಗಲ್ಲ. ರಾಷ್ಟ್ರೀಯ ಪಕ್ಷ ಈಸ್ಟ್ ಇಂಡಿಯಾ ಕಂಪನಿಯಂತೆ . ಪ್ರತಿ ಇಲಾಖೆಯಲ್ಲಿಯೂ ಸಿಂಡಿಕೇಟ್ ಕೆಲಸ ಮಾಡಿತ್ತಿವೆ. ಯಾವ ವರ್ಗಾವಣೆ ಎಂದು ಸಿಂಡಿಕೇಟ್ ಲಿಸ್ಟ್ ಮಾಡುತ್ತವೆ. ಸಿಂಡಿಕೇಟ್ ಸೂಚನೆಯಂತೆ ವರ್ಗಾವಣೆ ನಡೆಯುತ್ತದೆ. ಸರ್ಕಾರದಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಶ ಶುರುವಾಗಿದೆ ಎಂದು ದೂರಿದರು.
ಒಬ್ಬ ಶಾಸಕನಾಗಿ ಸರ್ಕಾರದ ಲೋಪದೋಷ ಬಗ್ಗೆ ಚರ್ಚಿಸ್ತೇನೆ. ವಿಪಕ್ಷ ನಾಯಕನಾಗಿ ಈ ಸರ್ಕಾರವನ್ನು ಟೀಕಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ ಏನು ಭರವಸೆ ಕೊಟ್ಟಿರಿ. ಆ ಭರವಸೆಗಳನ್ನು ಯಾವ ರೀತಿ ಈಡೇರಿಸಲು ಹೊರಟ್ಟಿದ್ದೀರಿ. ಈ ಸರ್ಕಾರ ICUಗೆ ಹೋಗುವ ಕಾಲ ಬರುತ್ತೆ ಎಂದು ಅನಿಸುತ್ತೆ. ಐಸಿಯು, ವೆಂಟಿಲೇಟರ್ ಮೇಲೆ ಈ ಸರ್ಕಾರ ನಡೆಯಬಹುದು. ಆರ್ಥಿಕ ಪರಿಸ್ಥಿತಿ ಆ ಮಟ್ಟಕ್ಕೆ ಹೋಗಲಿದೆ. ಮುಂದಿನ 5 ವರ್ಷಕ್ಕೆ ಏನು ಕೊಡಬೇಕೆಂಬ ಆತ್ಮವಿಶ್ವಾಸವೇ ಇಲ್ಲ. ರಾಜ್ಯಪಾಲರ ಭಾಷಣ ವೇಳೆ ಶಾಸಕರು ಮೇಜು ಕುಟ್ಟಿದ್ದು ನೋಡಿಲ್ಲ ಎಂದು ಹೆಚ್.ಡಿಕೆ ಟೀಕಿಸಿದರು.
Key words: Demand – money – CM’s office-HD Kumaraswamy