ಮೈಸೂರು,ಫೆಬ್ರವರಿ,3,2023(www.justkannada.in): ಮೈಸೂರು ವಿಶ್ವ ವಿದ್ಯಾನಿಲಯ ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬಿಡುಗಡೆ ಗೊಳಿಸುವಂತೆ ಕರ್ನಾಟಕ ಪ್ರಜಾ ಪಾರ್ಟಿ ಒತ್ತಾಯಿಸಿದೆ.
ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ಪ್ರಜಾ ಪಾರ್ಟಿ ರಾಜ್ಯಾದ್ಯಕ್ಷ ಡಾ.ಬಿ. ಶಿವಣ್ಣ. ಪ್ರಸ್ತುತ ಮೈಸೂರು ವಿವಿಯಲ್ಲಿ 250ಕ್ಕೂ ಹೆಚ್ಚು SC ST ಸಂಶೋಧನಾ ವಿದ್ಯಾರ್ಥಿಗಳಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 2022-23 ನೇ ಸಾಲಿನಲ್ಲಿ 2.47 ಕೋಟಿಯಷ್ಟು ಶಿಷ್ಯವೇತನ ಮೀಸಲಿಡಲಾಗಿತ್ತು. ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಕೂಡ ಹಣ ಮಂಜೂರು ಮಾಡಿದೆ.
ಇಷ್ಟೆಲ್ಲಾ ಆದರೂ ಮಂಜೂರಾಗಿರುವ ಹಣವನ್ನು ವಿದ್ಯಾರ್ಥಿಗಳಿಗೆ ನೀಡದೇ ಒಂದಲ್ಲ ಒಂದು ನೆಪ ಹೇಳಿ ಕಾಲಹರಣ ಮಾಡುತ್ತಾ ಬಂದಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವುದು ವಿವಿಯ ಕರ್ತವ್ಯವಾಗಿದೆ. ಹಗರಣಗಳ ತಾಣವಾಗಿ ಮೈಸೂರು ವಿವಿ ಮಾರ್ಪಾಡಾಗಿದೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡುತ್ತೇವೆಂದು ಮೈಸೂರು ವಿವಿ ಆಡಳಿತ ಮಂಡಳಿ ಗೆ ಡಾ ಬಿ ಶಿವಣ್ಣ ಎಚ್ಚರಿಕೆ ನೀಡಿದರು.
Key words: Demand -release – stipend – research -students -Mysore University.