ಮೈಸೂರು,ಅ,12,2019(www.justkannada.in): ಸ್ವಾಮಿ ವಿವೇಕಾನಂದ ಟ್ರಸ್ಟ್ ಸರ್ಕಾರಿ ಶಾಲೆಯನ್ನ ಮುಚ್ಚಲು ಮುಂದಾಗಿದ್ದು, ಹೀಗಾಗಿ ಸರ್ಕಾರಿ ಶಾಲೆಯನ್ನ ಉಳಿಸುವಂತೆ ಆಗ್ರಹಿಸಿ ಶಾಲೆಯ ಮಕ್ಕಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಎನ್ ಟಿ ಎಂ ಎಸ್ ಶಾಲೆ ಉಳಿವಿಗಾಗಿ ಇದೀಗ ಶಾಲೆಯ ಮಕ್ಕಳ ಪೋಷಕರು ಮತ್ತು ಸಾರ್ವಜನಿಕರುಮ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಬಿಜೆಪಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಶಾಲೆ ಸರ್ಕಾರದ ಆಸ್ತಿ. ಆದರೆ ಕೆಲ ಭೂ ಮಾಫಿಯಾದವರು ವಿವೇಕಾನಂದರ ಹೆಸರು ಹೇಳಿ ಲೂಟಿ ಮಾಡುತ್ತಿದ್ದಾರೆ. ಅಂದಿನ ಬಿಜೆಪಿ ಸರ್ಕಾರದ ಶಾಸಕ ರಾಮದಾಸ್ ಇದು ಸರ್ಕಾರದ್ದಲ್ಲ ವಿವೇಕಾನಂದ ಟ್ರಸ್ಟ್ ನ ಜಾಗ ಅಂತಾ ಹೇಳಿದ್ದಾರೆ. ಇವರುಗಳು ಸರ್ಕಾರಿ ಶಾಲೆಯ ಮಕ್ಕಳನ್ನು ಬೀದಿಗೆ ಕಳುಹಿಸಿ ಲೂಟಿ ಮಾಡಲು ಹೊರಟಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಈ ಶಾಲೆಯನ್ನು ಮುಚ್ಚಲು ಹೊರಟ ಸ್ವಾಮಿ ವಿವೇಕಾನಂದ ಟ್ರಸ್ಟ್ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದೇವೆ. ಈ ಕೇಸ್ ಹೈಕೋರ್ಟ್ ವಿಚಾರಣೆ ಹಂತದಲ್ಲಿದೆ. ಆದ್ರೂ ಕೂಡ ಟ್ರಸ್ಟ್ ನವರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ. ಈ ಕುರಿತು ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ಹೀಗಾಗಿ ಶಾಲೆಯ ಉಳಿವಿಗಾಗಿ ನಿರಂತರ ಹೋರಾಟ ನಡೆಸುತ್ತೆವೆ. ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ 48 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದು ನಗರ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ಉತ್ತಮ ಸಂಖ್ಯೆಯೆ ಅಗಿದೆ. ಈಗಾಗಿ ಶಾಲೆಯ ಉಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
Key words: Demanding- government school – save- mysore-protest