ಬೆಂಗಳೂರು,ಡಿಸೆಂಬರ್,15,2020(www.justkannada.in): ವಿಧಾನ ಪರಿಷತ್ ನಲ್ಲಿ ಇಂದು ಗದ್ದಲ ಗಲಾಟೆ ನಡೆದಿದ್ದು, ಬಿಜೆಪಿಯವರು ಸಂವಿಧಾನದ ನೀತಿ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಈ ರೀತಿ ಮಾಡಿ ಎಂದು ಸಂವಿಧಾನ ಹೇಳುತ್ತಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ವಿಧಾನಪರಿಷತ್ ನಲ್ಲಿನ ಗಲಾಟೆಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇಂದಿನ ವಿಧಾನ ಪರಿಷತ್ ನಲ್ಲಿನ ಗಲಾಟೆಯ ಬಗ್ಗೆ ವಿಷಾದಿಸುತ್ತೇನೆ. ಆದ್ರೇ ಸಭಾಪತಿ ಇದ್ದಾಗ ಉಪಸಭಾಪತಿ ಹೇಗೆ ಬಂದರು.? ಸಭಾಪತಿ ಬರುವ ಮೊದಲೇ ಉಪಸಭಾಪತಿ ಕೂತಿದ್ಯಾಕೆ…? ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
ಅವಿಶ್ವಾಸ ನಿರ್ಣದ ನೋಟಿಸ್ ಕ್ರಮಬದ್ಧವಾಗಿರಲಿಲ್ಲ. ನೋಟಿಸ್ ತಿರಸ್ಕರಿಸುವ ಅಧಿಕಾರ ಸ್ಪೀಕರ್ ಗೆ ಇದೆ. ಕ್ರಮಬದ್ಧವಾಗಿರದಂತಹ ನೋಟಿಸ್ ಅನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ. ನಿಯಮಾವಳಿ ಪ್ರಕಾರ ಕಲಾಪ ನಡೆಯಬೇಕು. ಹೀಗಿದ್ದೂ ಇದ್ಯಾವುದನ್ನು ಇಂದಿನ ಕಲಾಪದಲ್ಲಿ ಪಾಲಿಸಿಲ್ಲ ಎಂದು ಸಿದ್ಧರಾಮಯ್ಯ ಆರೋಪಿಸಿದರು.
ಮೋಷನ್ ರಿಜೆಕ್ಟ್ ಆದ ಮೇಲೆ ಸಭಾಪತಿ ಕೂರುವ ಬದಲಾಗಿ, ಉಪ ಸಭಾಪತಿಯನ್ನು ಕೂರಿಸಿದ್ದು ಬಿಜೆಪಿ. ಇದು ಕಾನೂನು ಬಾಹಿರ ಅಪರಾಧವಾಗಿದೆ. ಜೇರ್ಮೆನ್ ಬರಬಾರದು ಎಂಬುದಾಗಿ ಬಾಗಿಲು ಕೂಡ ಹಾಕಿದ್ದು ಬಿಜೆಪಿ ಗುಂಡೂಗಿರಿ ಅಲ್ವಾ.? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
Key words: democratic carnage – BJP-JDS- Former CM- Siddaramaiah