ಮೈಸೂರು,ನವೆಂಬರ್,2,2020(www.justkannada.in): ನಕಲಿ ಸೀಗರೇಟ್ ಗೆ ತಯಾರಿಕೆಗೆ ತಂದಿದ್ದ ಫಿಲ್ಟರ್ ಸಿಗರೇಟ್ ಗಳು ಮೈಸೂರಿನ ಲಿಂಗಾಬುದಿ ಕೆರೆ ಬಳಿ ಪತ್ತೆಯಾಗಿದ್ದು ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ತನಿಖೆ ನಡೆಸುವಂತೆ ಅಲ್ಲಿನ ವಾಯುವಿಹಾರಿಗಳು ಒತ್ತಾಯಿಸಿದ್ದಾರೆ.
ಮೈಸೂರಿನ ಲಿಂಗಾಬುದಿ ಕೆರೆಗೆ ಹರಿದುಬಂದಿರೋ ನೀರಿನಲ್ಲಿ ಫಿಲ್ಟರ್ ಸಿಗರೇಟ್ ಪ್ಯಾಕೇಟ್ ಗಳು ಪತ್ತೆಯಾಗಿವೆ. ಬಂಡಲ್ ಗಟ್ಟಲೇ ಚರಂಡಿ ನೀರಿನಲ್ಲೆ ಫಿಲ್ಟರ್ ಸಿಗರೇಟ್ ಪ್ಯಾಕೇಟ್ ಗಳ ಕಂಡು ಬಂದಿದ್ದು ಇದು ಪ್ರತಿನಿತ್ಯ ವಾಯುವಿಹಾರಕ್ಕೆ ತೆರಳೋ ಸಾರ್ವಜನಿಕರ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ತನಿಖೆ ನಡೆಸುವಂತೆ ವಾಯುವಿಹಾರಿಗಳು ಒತ್ತಾಯಿಸಿದ್ದಾರೆ.
ಇಲ್ಲಿ ಪತ್ತೆಯಾಗಿರುವ ಸಾವಿರಾರು ಸಿಗರೇಟ್ ಪ್ಯಾಕೇಟ್ ಗಳಿಂದ ಸಾಕಷ್ಟು ಅನುಮಾನ ಉಂಟಾಗಿದ್ದು, ಪೊಲೀಸರ ಭಯದಿಂದ ನಕಲಿ ತಯಾರಿಕೆ ಕಂಪನಿಗಳು ಫಿಲ್ಟರ್ ಪ್ಯಾಕೇಟ್ ಗಳನ್ನ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮೈಸೂರಿನಲ್ಲಿ ತಲೆ ಎತ್ತಿವೆಯಾ ನಕಲಿ ಸಿಗರೇಟ್ ತಯಾರಿಕೆ ಕಂಪನಿಗಳು ಎಂಬ ಅನುಮಾನ ಕಾಡತೊಡಗಿದ್ದು, ಸಿಗರೇಟ್ ಪ್ರಿಯರು ಸಿಗರೇಟ್ ಸೇದುವ ಮುನ್ನ ಎಚ್ಚರ ವಹಿಸದಿದ್ದರೆ ಜೀವಕ್ಕೆ ಕುತ್ತು ಬರುವುದು ನಿಶ್ಚಿತ.
Key words: Detection –bundle- filter cigarettes – Mysore-appropriate- action.