ಬೆಂಗಳೂರು,ಜುಲೈ,25,2022(www.justkannada.in): ದೇಶದಲ್ಲಿ ಮಂಕಿಪಾಕ್ಸ್ ಪತ್ತೆ ಹಿನ್ನೆಲೆ, ರಾಜ್ಯದಲ್ಲಿ ನಾವು ಎಚ್ಚರಿಕೆಯಿಂದ ಇದ್ದೇವೆ. ಹೀಗಾಗಿ ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ಮಂಕಿಪಾಕ್ಸ್ ಪತ್ತೆ ಹಿನ್ನೆಲೆ ಡಬ್ಲ್ಯು ಹೆಚ್ ಒ ಹೆಲ್ತ್ ಎಮರ್ಜನ್ಸಿ ಘೋಷಿಸಿದೆ. ಮಂಕಿಪಾಕ್ಸ್ ಆನೇಕ ದೇಶಗಳಲ್ಲಿ ಪತ್ತೆಯಾಗಿದೆ. ಕೊರೋನಾ ರೀತಿ ಸೋಂಕು ವೇಗವಾಗಿ ಹರಡಲ್ಲ. ಸೋಂಕು ಕಂಡು ಬಂದ್ರೆ ತಕ್ಷಣ ಚಿಕಿತ್ಸೆಗೆ ಸೂಚನೆ ನೀಡುತ್ತೇವೆ.
ಮಂಕಿಪಾಕ್ಸ್ ತೀವ್ರವಾಗಿ ಭಾದಿಸುತ್ತೆ. ಆದರೆ ಸಾವು ನೋವು ಕಡಿಮೆ. ಸೋಂಕು ಬಂದ ವ್ಯಕ್ತಿಗೆ ಐಸೋಲೇಟ್ ಮಾಡಬೇಕು. ಆದರೆ ಜನರು ಆತಂಕಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ನಾವು ಎಚ್ಚರಿಕೆಯಿಂದ ಇದ್ದೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.
Key words: detection – monkeypox – country- Health Minister- Sudhakar.