ಮೈಸೂರು,ಆ,10,2020(www.justkannada.in): ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.
ಹೆಚ್.ಡಿ ಕೋಟೆ ತಾಲ್ಲೂಕು ವಿಶ್ವನಾಥಯ್ಯ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗೋವಿಂದನಾಯ್ಕ (30) ಮೃತ ವ್ಯಕ್ತಿ. ಕಳೆದ ರಾತ್ರಿ ಈ ಘಟನೆ ಸಂಭವಿಸಿದ್ದು ಈ ಸಾವಿನ ಪ್ರಕರಣ ಸಾಕಷ್ಟು ಅನುಮಾನ ಹುಟ್ಟಿಸಿದೆ. ಕೌಟುಂಬಿಕ ಕಲಹದಿಂದ ಪತಿ ಮತ್ತು ಪತ್ನಿ ಇಬ್ಬರು ಬೇರೆಯಾಗಿದ್ದರು.
ಈ ನಡುವೆ ಕಳೆದ ತಡರಾತ್ರಿ ನೇಣುಬಿಗಿದ ಸ್ಥಿತಿಯಲ್ಲಿ ಗೋವಿಂದ ನಾಯ್ಕನ ಶವ ಪತ್ತೆಯಾಗಿದ್ದು ಪೊಲೀಸರು ಮೃತನ ಪತ್ನಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್. ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Detection – person- corpse – hanging –mysore