ಮೈಸೂರು,ಜನವರಿ,11,2025 (www.justkannada.in): ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆ ತೆರವುಗೊಳಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ ವಿಚಾರ ಸಂಬಂಧ ದೇವರಾಜ ಮಾರುಕಟ್ಟೆ ಸಂಘದ ಅಧ್ಯಕ್ಷ ಮಹದೇವ್ ಪ್ರತಿಕ್ರಿಯಿಸಿ ನ್ಯಾಯಾಲಯದ ತೀರ್ಪಿಗೆ ನಾವು ಬದ್ಧ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಮಹದೇವ್ ಅವರು, ಈ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯ ಯಾವುದೇ ರೀತಿಯ ತೀರ್ಪು ನೀಡಿದರೂ ಸ್ವಾಗತ. ಇದನ್ನ ನವೀಕರಣ ಮಾಡಬೇಕು ಅನ್ನೋದು ನಮ್ಮೆಲ್ಲರ ಆಶಯ. ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡ ಆಗಿದೆ. ಇಡೀ ಕಟ್ಟಡ ಶಿಥಿಲಗೊಂಡಿಲ್ಲ. ಎಲ್ಲಿ ಶಿಥಿಲ ಆಗಿದಿಯೋ ಅಲ್ಲಿ ನವೀಕರಣ ಮಾಡಬಹುದು ಎಂದರು.
2016ರಲ್ಲಿ ಒಂದು ಭಾಗದಲ್ಲಿ ಕಟ್ಟಡ ಕುಸಿತ ಆಯಿತು. ಅದನ್ನ ಬೇಕಂತಲೇ ಬೀಳಿಸಲಾಗಿದೆ. ಇಡಿ ಕಟ್ಟಡ ಶಿಥಿಲ ಆಗಿದೆ ಎಂದು ಬಿಂಬಿಸುವ ಯತ್ನ ನಡೆಯಿತು. ತಜ್ಞರ ಆಯೋಗ ಬಂದು ಕಟ್ಟಡ ಸುಸ್ಥಿತಿಯಲ್ಲಿದೆ ಎಂದು ವರದಿ ನೀಡಿದೆ. ಅದನ್ನು ಕೂಡ ನ್ಯಾಯಾಲಯ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವ ಭರವಸೆ ಇದೆ. ನ್ಯಾಯಾಲಯದ ತೀರ್ಪಿಗೆ ಬದ್ದರಿದ್ದೇವೆ ಎಂದು ಮಹದೇವ್ ಹೇಳಿದರು.
ನಿನ್ನೆ ನಡೆದ ಮೈಸೂರು ಅಭಿವೃದ್ದಿ ಕುರಿತು ಸಭೆಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಶಿಥಿಲ ಪರಿಸ್ಥಿತಿಯಲ್ಲಿರುವ ದೇವರಾಜ ಅರಸು ಮಾರುಕಟ್ಟೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
Key words: CM, Devaraja Market, court, decision, Mahadev