ಹಾಸನ, ಅಕ್ಟೋಬರ್ 21,2023(www.justkannada.in): ಕಳೆದ ಲೋಕಸಭೆ ಚುನಾವಣೆಯಲ್ಲಿ ಹೆಚ್ .ಡಿ ದೇವೇಗೌಡರನ್ನು ತುಮಕೂರಿಗೆ ಕರೆದೊಯ್ದು ಯಾವ ರೀತಿ ಟೋಪಿ ಹಾಕಿದರು. ಮಂಡ್ಯದಲ್ಲಿ ನಿಖಿಲ್ ನಿಲ್ಲಿಸಿ ಏನು ಮಾಡಿದ್ರು ಅಂತಾ ಗೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ರೇವಣ್ಣ, ಬಿಜೆಪಿ ನಾಯಕರ ಮನೆ ಬಾಗಿಲು ಬಡಿದಿದ್ದ ನಾವಲ್ಲ. ಅವರು ಹೇಳಬೇಕಾಗಿತ್ತು, ದೇವೇಗೌಡರೇ ನಿಲ್ಲಬೇಡಿ ನಾವು ಒಳಗೆ ಬಿಜೆಪಿ ಬೆಂಬಲಿಸುತ್ತೇವೆ ಎಂಬುದಾಗಿ ಹೇಳಿದ್ರು. ಹಾಗೆಯೇ ಮುನಿಯಪ್ಪ ಅವರನ್ನು ಸೋಲಿಸಿದ್ದು ಯಾರು? ಇವರು ಬೇಕಾದಾಗ ಬಂದು ಕಾಲು ಕಟ್ಟುತ್ತಾರೆ ಇದು ಅವರ ಸಂಸ್ಕೃತಿ. ವಿದಾನಸಭೆ ಚುನಾವಣೆ ಆದಾಗ 2018 ರಲ್ಲಿ ದೇವೇಗೌಡರ ಪಾದಕ್ಕೆ ಯಾಕೆ ಬಿದ್ದರು ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ನವರು ಮಾನ ಮರ್ಯಾದೆ ಇದ್ದರೆ ಯಾವ ಮುಖ ಇಟ್ಟುಕೊಂಡು ಓಟ್ ಕೇಳ್ತಾರೆ? ಅದೆಂಥದೊ ಗ್ಯಾರಂಟಿ ಕಾರ್ಡ್ ಇಡ್ಟುಕೊಂಡು ಅಧಿಕಾರಕ್ಕೆ ಬಂದರು. ಈಗ ಒಂದು ಗಂಟೆ ವಿದ್ಯುತ್ ಕೊಡೋಕೆ ಆಗ್ತಿಲ್ಲ. ನಾನು ಇಂಧನ ಸಚಿವನಾಗಿದ್ದಾಗ ಒಂದು ರೂಪಾಯಿ ಕರೆಂಟ್ ಬಿಲ್ ಏರಿಸಿರಲಿಲ್ಲ. ನಾವು ಯಾರ ಮನೆಮುಂದೆನು ಹೋಗಬೇಕಾಗಿಲ್ಲ. ನಮ್ಮ ಪಕ್ಷ ಉಳಿಸಿಕೊಳ್ಳಲು ದೃಢವಾಗಿ ಇದ್ದೇವೆ ಎಂದು ಗುಡುಗಿದರು.
Key words: Deve Gowda – Tumkur – Nikhil- Mandya-HD Revanna –outrage- Congress