ಬೆಂಗಳೂರು,ಜನವರಿ,1,2025 (www.justkannada.in): 2017ರಿಂದ 2023ನೇ ಕ್ಯಾಲೆಂಡರ್ ವರ್ಷದ ಅಭಿವೃದ್ಧಿ ಮತ್ತು ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಪತ್ರಕರ್ತರನ್ನ ಆಯ್ಕೆ ಮಾಡಲಾಗಿದೆ.
ಅಭಿವೃದ‍್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರ ಹೆಸರು ಈ ಕೆಳಕಂಡಂತಿದೆ.
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: 2017ನೇ ಸಾಲಿಗೆ- ವಿಜಯಲಕ್ಷ್ಮೀ ಶಿಬರೂರು- ಡಿಜಿಟಲ್ ಮಿಡಿಯಾ ಹಿರಿಯ ಪತ್ರಕರ್ತರು, ಬೆಂಗಳೂರು.
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2017ನೇ ಸಾಲಿಗೆ – ಚೀ ಜ. ರಾಜೀವ್, ಸುದ್ದಿ ಸಂಪಾದಕರು, ವಿಜಯ ಕರ್ನಾಟಕ, ಮೈಸೂರು.
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: 2018ನೇ ಸಾಲಿಗೆ- ಶ್ರೀ ಬಿಎಂಟಿ ರಾಜೀವ್, ಭಾ.ಅ.ಸೆ(ನಿ), ಹವ್ಯಾಸಿ ಪತ್ರಕರ್ತರು, ಬೆಂಗಳೂರು
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2018ನೇ ಸಾಲಿಗೆ- ದೇವಯ್ಯ ಗುತ್ತೇದಾರ್, ಸ್ಥಾನಿಕ ಸಂಪಾದಕರು, ವಿಜಯಕರ್ನಾಟಕ ದಿನಪತ್ರಿಕೆ, ಕಲಬುರಗಿ
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: 2019ನೇ ಸಾಲಿಗೆ- ವಿನೋದ ನಾಯ್ಕ, ಸಂಪಾದಕರು, ವಿಶೇಷ ಯೋಜನೆಗಳು ಏಷ್ಯಾನೆಟ್ ಸುವರ್ಣ ನ್ಯೂಸ್.
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2019ನೇ ಸಾಲಿಗೆ- ಗಿರೀಶ್ ಲಿಂಗಣ್ಣ, ಅಂಕಣಕಾರರು, ಬೆಂಗಳೂರು.
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: 2020ನೇ ಸಾಲಿಗೆ- ಮಾಲತೇಶ ಅಂಗೂರ, ಮುಖ್ಯ ವರದಿಗಾರರು, ಕೌರವ ಪತ್ರಿಕೆ ಮುಖ್ಯ ವರದಿಗಾರರು, ಹಾವೇರಿ
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2020ನೇ ಸಾಲಿಗೆ- ಯೋಗೇಶ್ ಎಂ.ಎನ್, ಹಿರಿಯ ವರದಿಗಾರರು, ಪ್ರಜಾವಾಣಿ, ಚಿತ್ರದುರ್ಗ
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: 2021ನೇ ಸಾಲಿಗೆ- ಸುಧೀರ್ ಶೆಟ್ಟಿ, ಹವ್ಯಾಸಿ ಪರಿಸರ ಛಾಯಾಗ್ರಾಹಕ, ಬೆಂಗಳೂರು.
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2021ನೇ ಸಾಲಿಗೆ- ನೌಶಾದ್ ಬಿಜಾಪುರ, ಹಿರಿಯ ಸಹಾಯಕ ಸಂಪಾದಕರು, ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್, ಬೆಳಗಾವಿ
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ: 2022ನೇ ಸಾಲಿಗೆ- ಸತೀಶ್ ಜಿ.ಟಿ. ಹಿರಿಯ ಸಹಾಯಕ ಸಂಪಾದಕರು, ದಿ ಹಿಂದೂ ಇಂಗ್ಲಿಷ್ ಡೇ ಪತ್ರಿಕೆ, ಚಿತ್ರದುರ್ಗ
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: 2023ನೇ ಸಾಲಿಗೆ- ಆರ್. ಮಂಜುನಾಥ್ (ಕೆರೆ ಮಂಜುನಾಥ್), ಮುಖ್ಯ ವರದಿಗಾರರು, ಪ್ರಜಾವಾಣಿ ದಿನಪತ್ರಿಕೆ, ಬೆಂಗಳೂರು
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ- 2023ನೇ ಸಾಲಿಗೆ- ಎಸ್.ಗಿರೀಶ್ ಬಾಬು, ಕಾರ್ಯನಿರ್ವಾಹಕ ಸಂಪಾದಕರು ಕನ್ನಡಪ್ರಭ ದಿನಪತ್ರಿಕೆ, ಬೆಂಗಳೂರು
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: 2023ನೇ ಸಾಲಿಗೆ- ಆರ್. ಮಂಜುನಾಥ್ (ಕೆರೆ ಮಂಜುನಾಥ್), ಮುಖ್ಯ ವರದಿಗಾರರು, ಪ್ರಜಾವಾಣಿ ದಿನಪತ್ರಿಕೆ, ಬೆಂಗಳೂರು
ಪರಿಸರ ಪತ್ರಿಕೋದ್ಯಮ -2022ನೇ ಸಾಲಿಗೆ- ಮಲ್ಲಿಕಾರ್ಜುನ ಹೊಸಪಾಳ್ಯ, ಹವ್ಯಾಸಿ ಪತ್ರಕರ್ತರು ತುಮಕೂರು
ಪ್ರಶಸ್ತಿಗೆ ನಿಗದಿಪಡಿಸಿರುವ ನಗದು ಮೊತ್ತ ತಲಾ ರೂ.1.00 ಲಕ್ಷಗಳಂತೆ ಒಟ್ಟು ರೂ.14.00 ಲಕ್ಷಗಳು, ಪ್ರಶಸ್ತಿ ಪ್ರದಾನ ಸಮಾರಂಭ, ಕಾರ್ಯಕ್ರಮ ನಿರ್ವಹಣಾ ವೆಚ್ಚ ರೂ.9.00 ಲಕ್ಷಗಳು ಸೇರಿದಂತೆ ಒಟ್ಟು ರೂ.23.00 ಲಕ್ಷ (ರೂಪಾಯಿ ಇಪ್ಪತ್ತಮೂರು ಲಕ್ಷ) ಮಾತ್ರಗಳ ವೆಚ್ಚವನ್ನು 2024- 25ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆ 2220-60-106-0-05 ಸರ್ಕಾರಿ ಕಾರ್ಯಕ್ರಮಗಳ ಪ್ರಚಾರ ಮತ್ತು ಮಾಹಿತಿ ಶಿಕ್ಷಣ ಸಂವಹನ 059 ಇತರೆ ವೆಚ್ಚಗಳು ಅಡಿಯಲ್ಲಿ ಒದಗಿಸಿರುವ ಅನುದಾನದಿಂದ ಭರಿಸಲು ಮಂಜೂರಾತಿ ನೀಡಲಾಗಿದೆ.
Key words: Development and Environmental, Journalism, Award, journalists