ಕರ್ನಾಟಕ ಅಭಿವೃದ್ಧಿಗೆ ಹೆಚ್ಚು ಒತ್ತು: ಜನರ ಆಕಾಂಕ್ಷೆ ಪೂರೈಸುತ್ತೆ ಡಬಲ್ ಇಂಜಿನ್ ಸರ್ಕಾರ -ಪ್ರಧಾನಿ  ಮೋದಿ.

ಮಂಗಳೂರು,ಸೆಪ್ಟಂಬರ್,2,2022(www.justkannada.in):  ಕರ್ನಾಟಕ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿದೆ. ಡಬಲ್ ಇಂಜಿನ್ ಸರ್ಕಾರ ಜನರ ಆಕಾಂಕ್ಷೆಗಳನ್ನ ಪೂರೈಸುತ್ತದೆ ಎಂದು ಪ್ರಧಾನಿ  ನರೇಂದ್ರ ಮೋದಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ  ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ  ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ 3800 ಕೋಟಿ ಮೊತ್ತದ ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ಪ್ರಧಾನಿ ಮೋದಿಗೆ ಮೈಸೂರು ಪೇಟಾ ತೋಡಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ನಂತರ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದ ಜನತೆಗೆ ನನ್ನ ನಮಸ್ಕಾರಗಳು. ಸ್ವಾತಂತ್ರೋತ್ಸವದಲ್ಲಿ ಪಂಚಪ್ರಾಣದ ಬಗ್ಗೆ ಮಾತು ಆಡಿದ್ದೆ. ಮೊದಲನೆಯದ್ದು ಅಭಿವೃದ್ದಿ.  ಮೇಕ್ ಇನ್ ಇಂಡಿಯಾ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ನಮ್ಮ ದೇಶದ ರಪ್ತು ಹೆಚ್ಚಾಗಬೇಕು.  ವಿಶ್ವದಲ್ಲಿ ಸ್ಪರ್ಧಿಸಬೇಕು. ಕಳೆದ  8 ವರ್ಷಗಳಿಂದ ದೇಶದಲ್ಲಿ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆ. ಮೂಲಸೌಕರ್ಯ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಒಂದು ಜಿಲ್ಲೆ ಒಂದು ಉತ್ಪಾದನೆ ಮೂಲಕ ಅಭಿವೃದ‍್ಧಿಗೆ ಒತ್ತು ನೀಡಲಾಗಿದೆ.   ಸಾಗರ್ ಮಾಲಾ ಯೋಜನೆ ಮತ್ತಷ್ಟು ಶಕ್ತಿ ತುಂಬುತ್ತದೆ.   ಕರ್ನಾಟಕ ರಾಷ್ಟ್ರೀಯ ಹೆದ್ದಾರಿಗೆ 70 ಸಾವಿರ ಕೋಟಿ ನೀಡಲಾಗಿದೆ.  1 ಲಕ್ಷ ಕೋಟಿ ರೂಪಾಯಿ ಪೈಪ್ ಲೈನ್ ಕಾಮಗಾರಿಗೆ ಮಂಜೂರು ಮಾಡಲಾಗಿದೆ.   ಬಂದರು ಅಭಿವೃದ್ಧಿಯನ್ನ ಅಭಿವೃದ್ಧಿ ಮಂತ್ರ ಮಾಡಿದ್ದೇವೆ.  ಕರ್ನಾಟಕದಲ್ಲಿ ರೈಲ್ವೆ ವಿದ್ಯುದೀಕರಣಕ್ಕೆ ಒತ್ತು. ಬೆಂಗಳೂರು –ಚೆನ್ನೈ, ಬೆಂಗಳೂರು –ಮೈಸೂರು ಹೆದ್ದಾರಿ  ಬೆಂಗಳೂರು ಸಾಟಲೈಟ್ ಸೇರಿ ಹಲವು ಕೆಲಸಗಳನ್ನ ಮಾಡಲಾಗಿದೆ ಎಂದರು.

ಕರ್ನಾಟಕದ 30 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಯುಷ್ಮಾನ್ ಭಾರತ ಲಾಭ ಸಿಕ್ಕಿದೆ. ಹಣ ಉಳಿಸಲು ಆಯುಷ್ಮಾನ್ ಭಾರತ ಸಹಾಯ ಮಾಡಿದೆ.  ಸುಮಾರು 4 ಕೊಟಿ ಜನರಿಗೆ ಉಚಿತ ಚಿಕಿತ್ಸೆ ಸಿಕ್ಕಿದೆ. ಬಡವರಿಗಾಗಿ 3 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗಿದೆ. ಕರ್ನಾಟಕದ ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣವಾಗಿದೆ. ಡಬಲ್ ಇಂಜಿನ್ ಸರ್ಕಾರ ಜನರ ಆಕಾಂಕ್ಷೆ ಪೂರೈಸುತ್ತೆ. ಈಗ ದೇಶದ ಮೂಲೆಯಲ್ಲೂ ಅಧುನಿಕ ಸೌಕರ್ಯ ಸಿಕ್ಕಿದೆ. ಆಧುನಿಕ ಮೂಲ ಸೌಕರ್ಯಕ್ಕೆ ಕೇಂದ್ರ ಒತ್ತು ನೀಡುತ್ತಿದೆ ಎಂದು ವಿವರಿಸಿದರು.

ಕರ್ನಾಟಕದ ಮೀನುಗಾರರ ಅಭಿವೃದ್ಧಿಗೆ ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಕೋಟ್ಯಾಂತರ ಜನರಿಗೆ ದೇಶದ ಅಭಿವೃದ್ಧಿ ಲಾಭ ಸಿಗುತ್ತಿದೆ.  ಮೆಟ್ರೋ ಸಂಪರ್ಕವನ್ನ ಹೆಚ್ಚು ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯದ 2 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯವಾಗಿದೆ.  ಎಲ್ಲರ ಶಕ್ತಿ ಹೆಚ್ಚಿಸುವ ಯೋಜನೆ ಜಾರಿಗೆ ತಂದಿದ್ದೆವೆ ಎಂದರು.

Key words:   development -Karnataka- PM-Narendra Modi-mangalore

ENGLISH SUMMARY…

More stress on development of State: Double engine Govt. will meet people’s expectations – PM Modi
Mangaluru, September 2, 2022 (www.justkannada.in): “The Central Government has given more stress for the development of Karnataka. The double engine government will definitely meet all the expectations of the people,” observed Prime Minister Narendra Modi.
He addressed a huge public gathering at the Gold Finch grounds, in Bangrakooluru, in Dakshin Kannada District today after launching various projects worth Rs. 3,800 crore. The Prime Minister was honoured by adorning a Mysuru turban and shawl.
In his address, the PM said, “During the Independence day speech, I had spoken about the important aspects. The first one is development. Our make in India program is widening. Our country’s exports should increase. We should compete with the world. In the last 8 years the basic infrastructure in our country has witnessed massive changes. We have given priority for development of the infrastructure. We have also focused on ‘One District, One Product.’ The Sagarmala program adds more strength to this program. The centre has given Rs. 70,000 crore for the development of National Highways in Karnataka. The Rs. 1 lakh crore pipeline works worth has been sanctioned. We have realized the dream of development of ports. Also we expedited the railway electrification works, including completion of the Bengaluru-Chennai, Bengaluru-Mysuru highway works,” he explained.
He also said that his government would strive for development of fisheries in Karnataka. “Crores of people are utilizing the benefit of our development works. The Metro connection is being increased. Our program has helped more than two lakh street vendors. We have implemented programs that are beneficial for all,” he added.
Keywords: PM Modi/ Dakshin Kannada/ Double engine govt