ವಿವಿಧ ಅಭಿವೃದ್ಧಿ ಕಾಮಗಾರಿ ಕ್ರಿಯಾ ಯೋಜನೆಗೆ ಅನುಮೋದನೆ: 312 ಸಿಎ ನಿವೇಶನ ಹಂಚಿಕೆಗೆ ನಿರ್ಧಾರ-ಮುಡಾ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್.

ಮೈಸೂರು,ಜನವರಿ,9,2023(www.justkannada.in): ವಿವಿಧ ಅಭಿವೃದ್ಧಿ ಕಾಮಗಾರಿ ಕ್ರಿಯಾ ಯೋಜನೆಗೆ ಅನುಮೋದನೆ ಮತ್ತು 312 ಸಿಎ ನಿವೇಶನ ಹಂಚಿಕೆಗೆ ಮಾಸಿಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಯಶಸ್ವಿನಿ ಸೋಮಶೇಖರ್ ತಿಳಿಸಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮುಡಾ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್ , ಇಂದು ನನ್ನ ಮೊದಲ ಮಾಸಿಕ ಸಭೆ ಮಾಡಲಾಗಿದೆ. ಮೈಸೂರು ಸುತ್ತ ಮುತ್ತ ಇರುವ 92 ಬಹು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಪ್ರಾಧಿಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆಗೆ ಅನುಮೋದನೆ, ಹಳೇ ಬಡಾವಣೆಗಳ ಅಭಿವೃದ್ಧಿ, ಹೊಸ ಬಡಾವಣೆಯ  ಅಭಿವೃದ್ಧಿಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ. ವಿಶ್ವವಿದ್ಯಾಲಯದ ಸ್ಕೂಲ್ ಅಫ್ ಪ್ಲಾನಿಂಗ್ ಆರ್ಕಿಟೆಕ್ಟ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಲಾಗಿದೆ. ಮೈಸೂರು ‌ನಗರದಲ್ಕಿ ಮಲ್ಟಿ ಲೇವಲ್ ಪಾರ್ಕಿಂಗ್ ಮಾಡಲು ನಿರ್ಣಯ, ಪಾಲಿಕೆ ವಲಯ ಕಚೇರಿ ನಿರ್ಮಾಣಕ್ಕೆ ನಿವೇಶನ‌ ಮಂಜೂರು, ಮುಕ್ತ ವಿಶ್ವ ವಿದ್ಯಾನಿಲಯ ಕುಲಪತಿಗಳಿಗೆ ಸರ್ಕಾರಿ ನಿವಾಸ ನಿರ್ಮಾಣ ಮಾಡಲು ನಿವೇಶನ ಮಂಜೂರು ಮಾಡುವ ತೀರ್ಮಾನವನ್ನ ಕೈಗೊಳ್ಳಲಾಗಿದೆ ಎಂದರು.

312 ಸಿ ಎ ನಿವೇಶನ ಹಂಚಲು ನಿರ್ಧಾರ ಆಗಿದ್ದು, 157ನಿವೇಶನ ಹಂಚಿಕೆ ಈಗಾಗಲೇ ಆಗಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಣಯ ಆಗಲಿದೆ.  ಎರಡನೇ ಸಭೆಯಲ್ಲಿ ಇನ್ನೂ ಉಳಿದ ನಿವೇಶನಗಳ ಹಂಚಿಕೆ  ಮಾಡಲಾಗುವುದು. ಇನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರ ಕ್ರಿಕೆಟ್ ಸಂಸ್ಥೆ ಗೆ ನೀಡಲಾಗುವುದು. ಗುಂಪು ವಸತಿ ಯೋಜನೆ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ ಎಂದು ಯಶಸ್ವಿನಿ ಸೋಮಶೇಖರ್ ಹೇಳಿದರು.

Key words:  Development –Works- Decision -Muda –President- Yashasvini Somashekhar