ಮಹಾರಾಷ್ಟ್ರ ನೂತನ ಸಿಎಂ ಆಗಿ ದೇವೇಂದ್ರ ಫಢ್ನಾವಿಸ್ ಅಧಿಕಾರ ಸ್ವೀಕಾರ

ಮುಂಬೈ,ಡಿಸೆಂಬರ್,5,2024 (www.justkannada.in):  ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಅಧಿಕಾರಕ್ಕೇರಿದ್ದು ನೂತನ ಸಿಎಂ ಆಗಿ ದೇವೇಂದ್ರ ಫಢ್ನಾವಿಸ್ ಅಧಿಕಾರ ಸ್ವೀಕಾರ ಮಾಡಿದರು.

ಮುಂಬೈನ ಅಜಾದ್​ ಮೈದಾನದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂರನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ದೇವರ ಹೆಸರಿನಲ್ಲಿ​ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಸಿ.ಪಿ ರಾಧಕೃಷ್ಣನ್​ ಪ್ರತಿಜ್ಞಾವಿಧಿ ಬೋಧಿಸಿದರು.

ನಂತರ ಮಹಾಯುತಿ ಮೈತ್ರಿಕೂಟದ ಎನ್​ಸಿಪಿ ನಾಯಕ ಅಜಿತ್​ ಪವಾರ್ ಮತ್ತು ಶಿವಸೇನದ ನಾಯಕ ಏಕನಾಥ್​ ಶಿಂಧೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್​ ಶಾ, ರಾಜನಾಥ್​ ಸಿಂಗ್​, ಜೆಪಿ ನಡ್ಡಾ, ಹೆಚ್ ಡಿ ಕುಮಾರಸ್ವಾಮಿ  ಸೇರಿದಂತೆ ಹಲವು ರಾಜಕೀಯ ಗಣ್ಯರು, ಸಿನಿಮಾ ನಟರು ಉಪಸ್ಥಿತರಿದ್ದರು.

Key words: Devendra Fadnavis, oath, Maharashtra CM