ಚಿತ್ರದುರ್ಗ,ಮಾರ್ಚ್,07,2021(www.justkannada.in) : ದೇವರ ಪೂಜೆಗೆ ತೆಂಗಿನ ಕಾಯಿ ಒಡೆದು ಕೊಡು ಎಂದು ಕೇಳಿದ ಭಕ್ತನಿಗೆ ಪೂಜಾರಿ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಅಬ್ಬಿನ ಹೊಳೆ ವ್ಯಾಪ್ತಿಯಲ್ಲಿ ಬರುವ ಟಿ.ಗೊಲ್ಲರಹಟ್ಟಿಯ ಗೊಲ್ಲಾಳಮ್ಮ ದೇವಿಯ ಜಾತ್ರೆಯೂ ಎರಡು ದಿನಗಳಿಂದ ನಡೆದಿದೆ. ಇಂದು ಮೂರನೇ ದಿನವಾಗಿದ್ದು, ದೇವಿಯು ಗ್ರಾಮದೊಳಗೆ ಬರುವ ಸಂಪ್ರದಾಯವಿದೆ.
ಇದೇ ಸಮಯದಲ್ಲಿ ಗ್ರಾಮಸ್ಥರು ದೇವಿಯ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಮಾಡಿಸಿ ಪೂಜೆ ಮಾಡಿಸಿಕೊಂಡು ಬರುವುದು ಪದ್ದತಿ. ಅದರಂತೆ ಭಕ್ತ ಶೇಖರ್ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಪೂಜೆ ಮಾಡಿಕೊಡಿ ಎಂದು ಭರತ್ ಎನ್ನುವ ಪೂಜಾರಿಗೆ ಕೇಳಿದ್ದಾನೆ.
ಆದರೆ, ಪೂಜಾರಿ ಭರತ್ ಭಕ್ತನನ್ನು ಹಿಂದೆ ಸರಿಯುವಂತೆ ಹೇಳಿದ್ದಾನೆ. ಭಕ್ತ ಇನ್ನೊಮ್ಮೆ ಹಣ್ಣು ಕಾಯಿ ಪೂಜೆ ಮಾಡಿಕೊಡುವಂತೆ ಕೇಳಿದ್ದಕ್ಕೆ ಪೂಜೆ ಮಾಡಿಕೊಡುವ ಬದಲು ಕೈಲಿದ್ದ ಮಚ್ಚಿನಿಂದ ಏಕಾಏಕಿ ತಲೆಗೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಶೇಖರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣ ಅಬ್ವಿನ ಹೊಳೆ ಠಾಣೆಯಲ್ಲಿ ದಾಖಲಾಗಿದೆ.
key words : devotee-Above-Worship-favorite-Onslaught-Chitradurga-district-Event