ಮೈಸೂರು ,ಡಿಸೆಂಬರ್,17,2022(www.justkannada.in): ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ 2.40 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.
ಶ್ರೀಕಂಠನಿಗೆ ಭಕ್ತರು 2.40 ಕೋಟಿ ರೂ. ಅನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ. ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ 26 ಹುಂಡಿಗಳ ಎಣಿಕೆ ಕಾರ್ಯ ನಡೆಯಿತು. 2.40.96.139 ರೂಪಾಯಿ ಕಾಣಿಕೆ ಹರಿದು ಬಂದಿದ್ದು, 194 ಗ್ರಾಂ 800 ಮಿಲಿ ಚಿನ್ನ. 5 ಕೆಜಿ 50 ಗ್ರಾಂ ಬೆಳ್ಳಿ. ಹಾಗೂ 31 ವಿದೇಶಿ ಕರೆನ್ಸಿ ಸಂಗ್ರಹವಾಗಿದೆ.
ಶ್ರೀಕಂಠೇಶ್ವರನ ಚಿಕ್ಕ ಜಾತ್ರಾ ಮಹೋತ್ಸವ ನಡೆದ ಪರಿಣಾಮ ಈ ಬಾರಿ ಎರಡು ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ ಸ್ವಸಹಾಯ ಸಂಘದ ಮಹಿಳೆಯರು, ದೇವಾಲಯದ ಸಿಬ್ಬಂದಿ ಭಾಗಿಯಾಗಿದ್ದರು. ಎ.ಸಿ. ಕಮಲಾಬಾಯಿ, ಮೈಸೂರು ತಹಶೀಲ್ದಾರ್ ಗ್ರೇಡ್ 2 ಪುಟ್ಟಸ್ವಾಮಿ ಗೌಡ, ಇಒ ಜಗದೀಶ್ ಕುಮಾರ್.ಎಂ, ಎಇಒ ವೆಂಕಟೇಶ್ ಪ್ರಸಾದ್, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಟಿ.ಕೆ ನಾಯಕ್ ಖಾತೆ ಅಧೀಕ್ಷಕ ಗುರುಮಲ್ಲಯ್ಯ ಉಪಸ್ಥಿತರಿದ್ದರು.
Key words: devotees – Nanjangud- Srikantheswara temple- Rs 2.40 crore-Collection