ಪುನರಾವರ್ತನೆಯಾದ ದಸರಾ ಆನೆ ಕಿರಿಕ್‌: ಕಂಜನ್‌ ಮೇಲೆ ಮತ್ತೆರಗಿದ ಧನಂಜಯ..!

Dasara elephant Dhannajay again attacked Kanjan at Dhubri camp, Mysore.

 

ಮೈಸೂರು, ಅ.23,2024: (www.justkannada.in news) ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗಿಯಾಗಲು ಆಗಮಿಸಿದ್ದ ಕಂಜನ್ ಮತ್ತು ಧನಂಜಯ ಆನೆಗಳ ರಂಪಾಟ ಮರೆಯುವ ಮುನ್ನವೇ ಮತ್ತೆ ಅಂಥದ್ದೊಂದು ಕಿರಿಕ್‌ ಪುನಾರಾವರ್ತನೆಗೊಂಡಿದೆ.

ಯಶಸ್ವಿಯಾಗಿ ದಸರಾ ಮುಗಿಸಿ ಶಿಬಿರಕ್ಕೆ ಕಂಜನ್ ಮತ್ತು ಧನಂಜಯ್ ಆನೆ ಕ್ಯಾಂಪ್ ಗೆ ಮರಳಿವೆ. ವಿಪರ್ಯಾಸ ಎಂದ್ರೆ ಇಲ್ಲೂ ಸಹ ಧನಂಜಯ ಆನೆ, ಕಂಜನ್‌ ಮೇಲೆ ಎರಗಿ ಕಿರಿಕ್‌ ಮಾಡಿದೆ.

ದಸರಾ ಸಂಧರ್ಭದಲ್ಲಿ ರಾತ್ರಿಯ ವೇಳೆ ಕಂಜನ್ ಮೇಲೆ ದಾಳಿ ನಡೆಸಲು ಧನಂಜಯ ಆನೆ ಅಟ್ಟಾಡಿಸಿಕೊಂಡು ಹೋಗಿತ್ತು. ಈ ಘಟನೆ ಆಗ ಸಾಕಷ್ಟು ಆತಂಕ ಮೂಡಿಸಿತ್ತು.ಇದೀಗಾ  ದುಬಾರೆ ಆನೆ ಶಿಬಿರದಲ್ಲೂ ಧನಂಜಯ ಈ ಘಟನೆಯನ್ನು ಮರುಕಳಿಸಿದ್ದಾನೆ.

ಶಿಬಿರದಲ್ಲಿ ಕಂಜನ್ ಮತ್ತು ಧನಂಜಯ್ ಆನೆಗಳು ಜೊತೆಗಿದ್ದ ವೇಳೆ  ಧನಂಜಯ ಆನೆ,  ಕಂಜನ್ ಆನೆ ಮೇಲೆ ಏಕಾಏಕಿ ದಾಳಿ ನಡೆಸಿದೆ. ಗೋಡೆ ಪಕ್ಕದಲ್ಲಿ ನಿಂತಿದ್ದ ಕಂಜನ್ ಆನೆ ಬೆನ್ನಿಗೆ ಧನಂಜಯ ಆನೆಯು ಜೋರು ಸದ್ದು ಮಾಡುತ್ತಾ ಬಲವಾಗಿ ಚುಚ್ಚಿದೆ.

ಈ ದಾಳಿಯನ್ನು ಸಹಿಸಲಾಗದೆ ಗೋಡೆಯುತ್ತ ಸಾಗಿ ದ್ದರೂ ಹಿಂಬದಿಯಿಂದ ಬಿಡದೆ ತಳ್ಳಿಕೊಂಡು ಸಾಗಿದೆ. ಸಾವರಿಸಿಕೊಳ್ಳಲು ಅವಕಾಶ ಕೊಡದೆ ಹಿಂಗಾಲಿಗೆ ದಂತದಿಂದ ಜೋರಾಗಿ ಚುಚ್ಚಿದೆ. ಆದರೆ ಕಂಜನ್ ಆನೆಯು ಗೋಡೆಯನ್ನು ದಾಟಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ದರೂ ಕಾಲಿಗೆ ಸರಪಳಿ ಕಟ್ಟಿದ್ದ ಹಿನ್ನೆಲೆಯಲ್ಲಿ ಸಾಧ್ಯವಾಗದೆ ನೋವನ್ನು ಸಹಿಸಿಕೊಂಡು ನಿಂತಿದೆ.

ಈ ವೇಳೆ ಧನಂಜಯನ ಮೇಲಿದ್ದ ಮಾವುತ ಆನೆಯನ್ನು ನಿಯಂತ್ರಿ ಸಲು ಹರಸಾಹಸ ಪಟ್ಟಿದ್ದಾರೆ. ಅಲ್ಲದೆ ಘಟನೆ ನಡೆಯುತ್ತಿದ್ದಂತೆ ಸುತ್ತಮುತ್ತಲಿದ್ದ ಮಾವುತರು, ಕಾವಾಡಿಗಳು ಮತ್ತು ಆನೆ ನೋಡಿ ಕೊಳ್ಳುವವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತರುವ ಮೂಲಕ ಅನಾಹುತ ತಪ್ಪಿಸಿದ್ದಾರೆ. ಆಗ ಧನಂಜಯ ಆನೆಯಿಂದ ಬೇರೆ ಆನೆಗಳನ್ನು ದೂರ ಕರೆದುಕೊಂಡು ಹೋಗಿದ್ದಾರೆ.

key words: Dasara elephant, Dhannajay, again attacked, Kanjan, at Dhubri camp, Mysore.

Dasara elephant Dhannajay again attacked Kanjan at Dhubri camp, Mysore.