ಬೆಂಗಳೂರು, ಜುಲೈ 11, 2019 (www.justkannada.in): ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು ಏಕದಿನ ಪಂದ್ಯಗಳಿಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ.
ಮಹೇಂದ್ರ ಸಿಂಗ್ ಧೋನಿ ಈ ಹಿಂದೆ ಯಾರೂ ಊಹಿಸದ ರೀತಿಯಲ್ಲಿ ಮೂರು ಮಾದರಿಯ ಕ್ರಿಕೆಟ್ನ ನಾಯಕತ್ವಕ್ಕೆ ಏಕಾಏಕಿ ದಿಢೀರನೇ ನಿವೃತ್ತಿ ಘೋಷಿಸಿದ್ದರು.
ಧೋನಿ ನಿವೃತ್ತಿಯ ನಂತರ ಈ ಸ್ಥಾನ ವಿರಾಟ್ ಕೊಹ್ಲಿಗೆ ಅನಾಯಾಸವಾಗಿ ಒಲಿದುಬಂದಿತ್ತು. ಧೋನಿ ನಾಯಕತ್ವಕ್ಕೆ ವಿದಾಯ ನೀಡಿದಂತೆ ಟೆಸ್ಟ್ ಕ್ರಿಕೆಟ್ಗೂ ದಿಢೀರೆಂದು ವಿದಾಯ ಘೋಷಿಸಿದ್ದರು.