ಎನ್‌ ಇಪಿಯಲ್ಲಿ ಡಿಜಿಟಲ್ ಪಠ್ಯಕ್ಕೆ ಅಧ್ಯಾಪಕರು ಆದ್ಯತೆ ನೀಡಬೇಕು- ಪ್ರೊ. ಜಿ.ಹೇಮಂತ್ ಕುಮಾರ್

ಮೈಸೂರು,ಅಕ್ಟೋಬರ್,28,2022(www.justkannada.in):  ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಧ್ಯಾಪಕರು ಡಿಜಿಟಲ್ ಪಠ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಘಿ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಮಾಜ  ಕಾರ್ಯ ವಿಭಾಗದ ವತಿಯಿಂದ ನಡೆದ ಎರಡು ದಿನದ ರಾಷ್ಟ್ರೀಯ ಉಪನ್ಯಾಸ  ‌ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಡಿಜಿಟಲ್ ಪ್ಲ್ಯಾಟ್‌ ಫಾರಂ ಹೆಚ್ಚು ಮುನ್ನಲೆಗೆ ಬಂದಿದೆ. ಆನ್‌ ಲೈನ್ ಕ್ಲಾಸ್‌ ಗಳು ಹೆಚ್ಚಾದಂತೆ ಡಿಜಿಟಲ್ ಪಠ್ಯಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀಡಿ ಸ್ಮಾರ್ಟ್ ಕ್ಲಾಸ್ ಬಗ್ಗೆಯೂ ಹೆಚ್ಚು ವಿಚಾರವನ್ನು ತಿಳಿಸಿಕೊಡುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಯಾವ ರೀತಿ ಡಿಜಿಟಲ್ ಪಠ್ಯವನ್ನು ಓದಬೇಕು? ಎಲ್ಲಿ ಲಭ್ಯವಿರುತ್ತದೆ? ಅದರಲ್ಲಿ ಯಾವುದನ್ನು ನಂಬಬೇಕು? ಎಂಬಿತ್ಯಾದಿ ಅಂಶಗಳನ್ನು ತಿಳಿಸಿಕೊಡಬೇಕು ಎಂದರು.

ಡಿಜಿಟಲ್ ಎಂಬುದು ಈ ಶತಮಾನದ ಹೊಸ ಮೈಲಿಗಲ್ಲು. ಮುಂಬರುವ ದಿನಗಳಲ್ಲಿ ಗರಿಷ್ಠ ಜನರಿಗೆ ಇದರಿಂದ ಒಳ್ಳೆಯದು ಆಗುವ ಸಾಧ್ಯತೆ ಉದೆ. ಶೈಕ್ಷಣಿಕ ಸಂಸ್ಥೆಗಳ ತಮ್ಮೆಲ್ಲಾ ಚರ್ಚೆಗಳು, ವಿಚಾರ ಸಂಕಿರಣಕ್ಕೆ ಡಿಜಿಟಲ್ ವೇದಿಕೆಯನ್ನು ಹೆಚ್ಚು ಬಳಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಉಪನ್ಯಾಸ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕಿದೆ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಮಾಹಿತಿ ಸೇತುವೆ ಕಟ್ಟಲು ಸಾಧ್ಯವಿದೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದಿಂದ ಸಾಕಷ್ಟು ನಾಯಕರು ಹೊರ ಬಂದಿದ್ದಾರೆ. ಸಾಕಷ್ಟು ಮಂದಿ ಇಂದು ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಆಧುನಿಕ ಸಿವಿಲ್ ಎಂಜಿನಿಯರಿಂಗ್ ವಿನ್ಯಾಸಕಾರರಾದ ವಿಶ್ವೇಶ್ವರಯ್ಯ ಅವರು ಹಾಗೂ ಸ್ವಾಮಿ ವಿವೇಕಾನಂದ ಅವರು ವಿದ್ಯಾರ್ಥಿಗಳಿಗೆ ಸ್ಫೂರ್ತಿಸೆಲೆ ಆಗಬೇಕು. ನಾನು ಮೈಸೂರು ವಿವಿಯಲ್ಲಿ ಓದಿ ಇದೀಗ ಇಲ್ಲಿಯೇ ಕುಲಪತಿ ಆಗಿದ್ದೇನೆ. ನಿರಂತರ ಅಧ್ಯಯನ ಹಾಗೂ ಶ್ರಮದಿಂದ ಇದು ಸಾಧ್ಯವಾಯಿತು. ಪ್ರತಿ ವಿದ್ಯಾರ್ಥಿಯಲ್ಲೂ ಒಬ್ಬ ಸಾಧಕ ಇರುತ್ತಾನೆ. ಆದರೆ, ಅದನ್ನು ಗುರುತಿಸುವ ಕೆಲಸ ಆಗಬೇಕಷ್ಟೇ,’’ ಎಂದರು.

ಸಮಾಜ ಕಾರ್ಯ ವಿಭಾಗವು ಸಮಾಜಮುಖಿ ಕೆಲಸದಲ್ಲಿ ತನ್ನನ್ನು ಹೆಚ್ಚು ತೊಡಗಿಸಿಕೊಂಡಿದೆ. ಸಮಾಜದೊಂದಿಗೆ ನೇರ ಸಂಪರ್ಕ ಸಾಧಿಸಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಡಿಜಿಟಲ್ ಪರಿಕಲ್ಪನೆಗಳು ಹೆಚ್ಚು ಮುನ್ನಲೆಗೆ ಬರುತ್ತಿದೆ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಇದು ಸರಳವೂ ಹಾಗೂ ಹೆಚ್ಚು ಪಾರದರ್ಶಕವೂ ಆಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂದಿನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ, ವಿಶ್ರಾಂತ ಕುಲಪತಿಗಳಾದ  ಪ್ರೊ. ಮಣಿಯನ್, ಪ್ರೊ. ವೈ. ಎಸ್.ಸಿದ್ದೇಗೌಡ, ವಿಭಾಗದ ಮುಖ್ಯಸ್ಥೆ ಡಾ.ಜ್ಯೋತಿ ಎಚ್‌ಪಿ. ಪ್ರೊ.ಚಂದ್ರಮೌಳಿ, ಡಾ.ಚೇತನ್ ಸಿಂಗೈ ಸೇರಿದಂತೆ ಇತರರು ಇದ್ದರು.

Key words: digital -text – NEP-mysore university-VC-Prof. G. Hemanth Kumar

ENGLISH SUMMARY…

Teachers should give priority to digital textbook under NEP: Prof. G. Hemanth Kumar
Mysuru, October 28, 2022 (www.justkannada.in): Prof. G. Hemanth Kumar, Vice-Chancellor, University of Mysore today called upon the teachers to give priority to digital curriculum under the new National Education Policy.
He participated in the two-day national lecture program organized by the Department of Social Works, University of Mysore, held at the Vignana Bhavana, in the Manasa Gangotri premises. In his address, he said, “today the digital platform has become very important. Demand for digital textbooks is gaining importance as the online classes are increasing. The National Education Policy explains about the smart classes. How students should read digital content? where it is available? which content is credible?, etc.”
“Digital is a new milestone of this century. There are all possibilities that it will reach more number of people and will do good in the coming days. As a result of this, it might become inevitable for the educational institutions to adapt to digital platforms to conduct discussions, seminars, etc. Such lecture programs will be of immense help in this regard. It will help to bridge the gap between the teachers and students,” he observed.
“The University of Mysore has produced several leaders. Many of them have identified in several different sectors in coveted posts. People like Visveswaraiah and Swami Vivekananda should become inspiration for the youth and students. I have also studied in the University of Mysore and now have become the Vice-Chancellor. Hard work, perseverance, regular research has helped me to become what I am today. There is an achiever in every student. But it is the duty of every student to identify it,” he said.
“The Department of Social Works has involved itself deeply in its work. It has been successful in establishing a direct contact with the society. Nowadays digital concepts have come to the fore under our social system. It is also simple and transparent in the advanced educational system. The students should make good utilization of this program,” he added.
Prof. R. Shivappa, Registrar, University of Mysore. former VC Prof. Maniyan, Prof. Y. S. Siddegowda, Department Head Dr. Jyoth H.P., Prof. Chandramouli, Dr. Chetan Singai and others were present.
Keywords: University of Mysore/Dept. of Social Works/ Prof. G. Hemanth Kumar/ Digital platform