ಹುಬ್ಬಳ್ಳಿ, ಆಗಸ್ಟ್, 23, 2020(www.justkannada.in) : ಜೈಲಲ್ಲಿದ್ದು, ಬಂದು ಇನ್ನೋಬ್ಬರ ನೈತಿಕತೆ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ. ಬೇಲ್ ಮೇಲೆ ಹೊರಗಿದ್ದೇನೆ ಎಂಬುದನ್ನು ಡಿಕೆಶಿ ಅರತುಕೊಳ್ಳಲಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ ಆಕ್ರೋಶವ್ಯಕ್ತಪಡಿಸಿದ್ದಾರೆ.
ಡಿಕೆಶಿ ತಮ್ಮ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ದೂರಿದ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿ, ಡಿಕೆಶಿ ವಿರುದ್ಧ ಯಾವುದೇ ಪ್ರಕರಣ ಮುಕ್ತವಾಗಿಲ್ಲ ಎಂಬುದನ್ನು ಅರಿತುಕೊಳ್ಳಲಿ. ಗಲಭೆ ಕೋರರ ಬೆನ್ನಿಗೆ ನಿಂತು ಪೊಲೀಸರ ಮೇಲೆ ಧಮ್ಕಿ ಹಾಕುವುದು ಸರಿಯಲ್ಲ.
ಕನಕಪುರದ ಗೂಂಡಾಗಿರಿ ಬೆಂಗಳೂರಿನಲ್ಲಿ ನಡೆಯಲ್ಲ. ರಾಜ್ಯ ಸರಕಾರದ ಯಶಸ್ಸು ಸಹಿಸಲಾಗದೇ ಹೀಗಾಡುತ್ತಿದ್ದಾರೆ. ‘ಪರೋಕ್ಷವಾಗಿ ಗಲಭೆಕೋರರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
Key words : Dikeshi-against-No-case-open-Minister-Jagadish-Shettar-Tong