ಸಿಎಂ ತೆಗೆಯಬೇಕು ಅಂತಾ ಯಾರೂ ಹೇಳುತ್ತಿಲ್ಲ. ಅದರ ಅವಶ್ಯಕತೆ ಇಲ್ಲ- ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ,ಫೆಬ್ರವರಿ,18,2025 (www.justkannada.in): ಕಾಂಗ್ರೆಸ್ ನಲ್ಲಿ ಸಿಎಂ ತೆಗೆಯಬೇಕು ಅಂತಾ ಯಾರೂ ಹೇಳ್ತಿಲ್ಲ. ಅದರ ಅವಶ್ಯಕತೆ ಇಲ್ಲ  ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಈ ಬಗ್ಗೆ ಚರ್ಚೆ ಆಗಬಾರದು ಸಿಎಂ ಅವರಿದ್ದಾಗ ಇವೆಲ್ಲಾ ಚರ್ಚೆ ಯಾಕೆ..?  ರಾಜಕೀಯ ಕ್ಷೇತ್ರದಲ್ಲಿ ಇವೆಲ್ಲಾ ಇದ್ದೇ ಇರುತ್ತೆ . ಎಲ್ಲರಿಗೂ ಆಸೆ ಆಕಾಂಕ್ಷೆ ಇರುತ್ತೆ.  ನನಗೆ ಸಿಎಂ ಆಗುವ ಆಕಾಂಕ್ಷೆ ಇಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಬಿರುಕಿಲ್ಲ ಪ್ರತಿಷ್ಟೆ ಇದೆ.  ಬಿಜೆಪಿಯಲ್ಲಿ ಸಂಪೂರ್ಣ ಬಿರುಕು ಇದೆ. ಬಿಜೆಪಿಯಲ್ಲಿ ಪ್ರತಿಷ್ಠೆ ಭಿನ್ನಾಭಿಪ್ರಾಯವಿಲ್ಲ. ಆದರೆ ಸಂಪೂರ್ಣ ಬಿರುಕಿದೆ. ಬಿಜೆಪಿಯಲ್ಲಿರುವ ರಾಜಕಾರಣವೇ ಬೇರೆ.  ನಮ್ಮಲ್ಲಿ ಎಲ್ಲರು ಚೆನ್ನಾಗಿದ್ದೇವೆ ಶಾಸಕರಲ್ಲಿ ವೈಮನಸ್ಸು ಇಲ್ಲ. ಕೆಲ ವಿಷಯದಲ್ಲಿ ಪ್ರತಿಷ್ಠೆಯಿಂದ ಏನೇನೋ ಮಾತನಾಡುತ್ತಿದ್ದಾರೆ ಎಂದರು.

Key words: CM  Change,  no need, Minister, Dinesh Gundu Rao