ಬೆಂಗಳೂರು, ಮಾರ್ಚ್,31,2025 (www.justkannada.in): ಸಿಎಂ ಸಿದ್ದರಾಮಯ್ಯ ಬಹಳ ದಿನಗಳಿಂದ ದೆಹಲಿಗೆ ಹೋಗಿರಲಿಲ್ಲ. ಈಗ ದೆಹಲಿಯಲ್ಲಿ ವರಿಷ್ಠರನ್ನ ಭೇಟಿಯಾಗಿ ಎಲ್ಲಾ ವಿಚಾರ ಚರ್ಚೆ ಮಾಡಲಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಸಿಎಂ ದೆಹಲಿಗೆ ಹೋಗಿ ಬಹಳ ದಿನವಾಗಿತ್ತು. ಸಿಎಂ ವರಿಷ್ಠರನ್ನ ಭೇಟಿ ಮಾಡುತ್ತಾರೆ. ಖರ್ಗೆ ರಾಹುಲ್ ಗಾಂಧಿ ಅವರನ್ನೂ ಕೂಡ ಸಿಎಂ ಭೇಟಿಯಾಗುತ್ತಾರೆ. ಸಿಎಂ ಆರೋಗ್ಯ ಏರುಪೇರು, ಬಜೆಟ್ ಇದ್ದ ಕಾರಣ ದೆಹಲಿಗೆ ಹೋಗಿರಲಿಲ್ಲ ಈಗ ದೆಹಲಿಗೆ ಹೋಗಿ ಎಲ್ಲಾ ವಿಷಯ ಚರ್ಚಸಿ ಬರುತ್ತಾರೆ ಸಿಎಂ ದೆಹಲಿ ಭೇಟಿ ಬಳಿಕ ಮುಂದಿನ ಹೆಜ್ಜೆ ಬಗ್ಗೆ ಗೊತ್ತಾಗುತ್ತದೆ ಎಂದರು
ಹನಿಟ್ರ್ಯಾಪ್ ಬಗ್ಗೆ ರಾಜಣ್ಣ ದೂರು ಕೊಟ್ಟಿದ್ದಾರೆ. ಮಾಹಿತಿ ಸಂಗ್ರಹ ಮಾಡಿ ತನಿಖೆ ಮಾಡುತ್ತಾರೆ ಎಲ್ಲವೂ ಹೊರಬರಲೇಬೇಕು. ಪರಮೇಶ್ವರ್ ರಾಜಣ್ಣ ನಡುವೆ ಒಳ್ಳೇ ಬಾಂಧವ್ಯವಿದೆ. ಇಬ್ಬರು ಬೆಂಚ್ ಮೆಟ್ಸ್ ಕೂಡ. ಹೀಗಾಗಿ ಒಳ್ಳಯ ತನಿಖೆ ಆಗುತ್ತದೆ ಎಂದರು.
Key words: CM Siddaramaiah, Delhi tour, Minister, Dinesh Gundu Rao