ಬೆಂಗಳೂರು,ಅಕ್ಟೋಬರ್,28,2021(www.justkannada.in): ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸೋದು ಹಿಂದಿನಿಂದಲೂ ಬಂದ ಸಂಪ್ರದಾಯ. ಈ ಮಧ್ಯೆ ಇತ್ತೀಚೆಗೆ ಕೊರೊನಾ ಹಿನ್ನೆಲೆ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಬಾರಿಯೂ ಪಟಾಕಿ ಸಿಡಿಸಲು ನಿರ್ಬಂಧ ಇದೆಯೇ ಎಂಬುದರ ಬಗ್ಗೆ ಸರ್ಕಾರ ಇನ್ನೂ ತೀರ್ಮಾನಿಸಿಲ್ಲ.
ಈ ಕುರಿತು ಹೇಳಿಕೆ ನೀಡಿರುವ ಸಚಿವ ಆನಂದ್ ಸಿಂಗ್ ಪಟಾಕಿ ಸಿಡಿಸುವುದನ್ನ ನಿರ್ಬಂಧಿಸುವುದು ಅಸಾಧ್ಯ. ಬಹಳ ವರ್ಷಗಳಿಂದ ಹಬ್ಬ ಆಚರಣೆ ಮಾಡಲಾಗುತ್ತಿದೆ. ಸಂಪ್ರಾದಾಯಿಕವಾಗಿ ಪಟಾಕಿ ಹೊಡೆಯುತ್ತಾರೆ. ಅದ್ದರಿಂದ ಸಂಪ್ರದಾಯ ಮುರಿಯಲು ಆಗಲ್ಲ ಎಂದರು.
ಹಾಗೆಯೇ ಕಡಿಮೆ ಪಟಾಕಿ ಹೊಡೆದು ಹಬ್ಬ ಆಚರಣೆ ಮಾಡಿದರೇ ಉತ್ತಮ. ಹೆಚ್ಚು ಹೆಚ್ಚು ದೀಪಗಳನ್ನ ಹಚ್ಚಿ ಹಬ್ಬ ಆಚರಿಸೋಣ. ದೀಪಾವಳಿ ಹಬ್ಬದ ನಿಯಮಾವಳಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.
Key words: dipavali festival- Fireworks -unavoidable – Minister -Anand Singh.