ಮೈಸೂರು,ಜನವರಿ,2,2021(www.justkannada.in): ಐಟಿಸಿ ಕಂಪನಿ ಹಾಗೂ ಗುತ್ತಿಗೆ ನೌಕರರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಬಗೆಹರಿದಿದೆ ಎಂದು ಮಂಜು ಕಿರಣ್ ಮತ್ತು ವಿದ್ಯಾಸಾಗರ್ ಅವರು ತಿಳಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ , ಹಾಗೂ ಹಸಿರು ಸೇನೆ ವತಿಯಿಂದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಂಜು ಕಿರಣ್ ಮತ್ತು ವಿದ್ಯಾಸಾಗರ್, ಐಟಿಸಿ ಕಂಪನಿಯ ಒಳಗೆ ಇದ್ದ ಕೆಲವೊಂದು ಶೋಷಣೆಗಳ ವಿಚಾರವಾಗಿ ಕಳೆದ 20 ದಿನಗಳಿಂದ 450 ಕ್ಕೂ ಹೆಚ್ಚು ಗುತ್ತಿಗೆ ನೌಕರರು ಚಳುವಳಿ ನಡೆಸುತ್ತಿದ್ದರು.
ಆದರೆ ಇದಕ್ಕೆ ಕಂಪನಿ ವತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಪ್ರತಿಭಟನಾ ನಿರತ ನೌಕರರು, ಸಾಮೂಹಿಕ ನಾಯಕತ್ವದ ಕರ್ನಾಟಕದ ರಾಜ್ಯ ರೈತ ಸಂಘದ ಬೆಂಬಲವನ್ನು ಕೇಳಿಕೊಂಡಿದ್ದರು. ಜತೆಗೆ ಸ್ಥಳೀಯ ಎಂಎಲ್ಎ ಯತೀಂದ್ರ ಸಿದ್ದರಾಮಯ್ಯ ಅವರನ್ನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 30 ರಂದು ಸಿದ್ದರಾಮಯ್ಯ ಅವರ ಮಧ್ಯಸ್ಥಿಕೆಯಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ , ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳು ಹಾಗೂ ಗುತ್ತಿಗೆ ನೌಕರರ ಮಧ್ಯೆ ಇದ್ದ ಭಿನ್ನಾಭಿಪ್ರಾಯಗಳನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ. ಜತೆಗೆ ಡಿಸೆಂಬರ್ 31 ರಂದು ಮೈಸೂರಿನ ಲೇಬರ್ ಕಮಿಷನರ್ ಕಚೇರಿಯಲ್ಲಿ ಗುರುಪ್ರಸಾದ್ ಡಿಎಲ್ಸಿ ಅವರ ಮುಖ್ಯಸ್ಥಿತಿಯಲ್ಲಿ ಶಾಂತಿಯುತವಾದ ಮಾತುಕತೆಯಿಂದ ಎಲ್ಲ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲಾಯಿತು ಎಂದು ಮಂಜು ಕಿರಣ್ ಮತ್ತು ವಿದ್ಯಾಸಾಗರ್ ತಿಳಿಸಿದರು, ಸುದ್ದಿಗೋಷ್ಟಿಯಲ್ಲಿ ಎಸ್ ರಘು ಹಿಮ್ಮಾವು , ಚೊರನಹಳ್ಳಿ ಶಿವಣ್ಣ , ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Key words: Disagreement –between- ITC company -contract employees – resolved-mysore-Vidyasagar.