ಇವರ್ಯಾರು ಗೊತ್ತಾ?: 80-90 ರ ದಶಕದ ಜನಪ್ರಿಯ ಡ್ಯಾನ್ಸರ್‌, ಈಗ ಸಮಾಜ ಸೇವಕಿ

Do you know her.?: Popular dancer of the 80s-90s, now a social worker

 

ಮೈಸೂರು, ಆ.30,2014: (www.justkannada.in news) ಅಂಧ್ರ ಪ್ರದೇಶ ಮೂಲದ ಈಕೆ ಬಳಿಕ ದಕ್ಷಿಣ ಭಾರತದ ಪ್ರಸಿದ್ಧ ನಟಿಯಾಗಿ ಜನಪ್ರಿಯತೆ ಪಡೆದವರು. 1980 ಮತ್ತು 1990ರ ದಶಕಗಳಲ್ಲಿ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಐಟಂ ನೃತ್ಯಗಳ ಮೂಲಕ ಪ್ರಸಿದ್ಧಿ ಪಡೆದವರು. ಹೆಸರು ಶಾಂತಕುಮಾರಿ.

ಶಾಂತ ಕುಮಾರಿ ಹೆಚ್ಚು ಜನರಿಗೆ ಪರಿಚಯವಿಲ್ಲ.  ‘ಡಿಸ್ಕೋ ಶಾಂತಿ’ (Disco Shanti) ಎಂದರೆ ಅರ್ಥವಾಗುತ್ತೆ.  ಇವರು ಜನಿಸಿದ್ದು 1965ರ ಆಗಸ್ಟ್ 28ರಂದು.  ಈಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದೀ ಮತ್ತು ಒಡಿಯಾ ಭಾಷೆಗಳ ಸುಮಾರು 900 ಚಿತ್ರಗಳಲ್ಲಿ “ ಐಟಮ್ ನಂಬರ್ “ ಹಾಡುಗಳಿಗೆ ನರ್ತಿಸಿದವವರು.

ಅವರ ನೃತ್ಯಗಳು ಮತ್ತು ಅದ್ವಿತೀಯ ಶೈಲಿಯ ಮೂಲಕ ಅವರು ಚಿತ್ರರಂಗದಲ್ಲಿ ಸುವರ್ಣಯುಗವನ್ನು ಕಂಡರು. ಡಿಸ್ಕೋ ಶಾಂತಿ ತಮ್ಮ ನೃತ್ಯ ಮತ್ತು ಸ್ಟೈಲಿಶ್ ಪರ್ಫಾರ್ಮೆನ್ಸ್‌ಗಳಿಗೆ ಪ್ರಸಿದ್ಧರಾಗಿದ್ದು, ಅವುಗಳನ್ನು ಆ ಕಾಲದ ಸಿನಿಮಾಗಳಲ್ಲಿ ವಿಶೇಷ ಆಕರ್ಷಣೆಗಳಾಗಿ ಪರಿಗಣಿಸಲಾಗುತ್ತಿತ್ತು.

ಇವರು ಮಾಡಿರುವಷ್ಟು ಸಮಾಜ ಸೇವೆ, ಖ್ಯಾತಿಯ ಉತ್ತುಂಗದಲ್ಲಿದ್ದವರಿಂದಲೂ ಮಾಡಲು ಆಗಿಲ್ಲ. ಶಾಂತ ಕುಮಾರಿ ಅವರ ತಂದೆ ಸಿ. ಎಲ್ .  ಆನಂದನ್ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಈಕೆಯ ಸಹೋದರಿ ಲಲಿತ ಕುಮಾರಿ ಜನಪ್ರಿಯ ಕಲಾವಿದೆ.  ಡಿಸ್ಕೋ ಶಾಂತಿ ತೆಲುಗು ನಟ ಶ್ರೀಹರಿ ಅವರನ್ನು 1995ರ ವರ್ಷ ವಿವಾಹವಾದ ನಂತರ ಚಲನಚಿತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದರು.

ಈ ದಂಪತಿಗಳಿಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗು. ಹೆಣ್ಣು ಮಗು ಅಕ್ಷರಾ ನಾಲ್ಕು ತಿಂಗಳು ಮಗುವಾಗಿದ್ದಾಗ ಅಸುನೀಗಿತು.

ಶಾಂತಿ ಮತ್ತು ಶ್ರೀಹರಿ ದಂಪತಿಗಳು ತಮ್ಮ ಮಗಳ ಹೆಸರಲ್ಲಿ ಅಕ್ಷರಾ ಫೌಂಡೇಷನ್ ಸ್ಥಾಪಿಸಿ ನೂರಾರು ಹಳ್ಳಿಗಳಿಗೆ ಫ್ಲೋರೈಡ್ ರಹಿತ ನೀರಿನ ಪೂರೈಕೆಗೆ ಕ್ರಮ ಕೈಗೊಂಡರು.  ಸಾವಿರಾರು ವಿದ್ಯಾರ್ಥಿಗಳಿಗೆ ಶಾಲಾ ಅಗತ್ಯ ವಸ್ತುಗಳ ಪೂರೈಕೆ ಮಾಡತೊಡಗಿದರು. ನಾಲ್ಕು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಆ ಹಳ್ಳಿಗಳ ಅಭಿವೃದ್ಧಿಗೆ ಕೆಲಸ ಮಾಡಿದರು. ಈ ಮಧ್ಯೆ ಶ್ವಾಸಕೋಶ ತೊಂದರೆಗೊಳಗಾದ ಶ್ರೀಹರಿ ನಟಿಸುತ್ತಿರವ ಸೆಟ್ನಲ್ಲೇ 2013ರಲ್ಲಿ ನಿಧನರಾದರು.

ಪ್ರಸ್ತುತ, ಅವರು ಸಿನಿಮಾ ರಂಗದಿಂದ ದೂರವಿದ್ದು, ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಜತೆಗೆ ಸಮಾಜ ಸೇವಾ ಕಾರ್ಯಗಳನ್ನು ಮುಂದುವರೆಸಿದ್ದಾರೆ.

key words:  Do you know her.?, Popular dancer, of the 80s-90s, now a social worker, disco shanti