ಬೆಳಗಾವಿ,ನವೆಂಬರ್,30,2020(www.justkannada.in): ಸಚಿವರಾಗಲು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅನರ್ಹ ಎಂದು ಹೈಕೋರ್ಟ್ ವಿಭಾಗೀಯ ಪೀಠ ,ಮಧ್ಯಂತರ ಆದೇಶ ನೀಡಿರುವ ಹಿನ್ನೆಲೆ, ಈ ಸಂಬಂಧ ಸುಪ್ರೀಂಕೋರ್ಟ್ ಗೆ ಹೋಗುವ ಬಗ್ಗೆ ಮಿತ್ರಮಂಡಳಿಯಲ್ಲಿ ಚರ್ಚಿಸುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂಬ ಹೈಕೋರ್ಟ್ ಆದೇಶ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಹೆಚ್.ವಿಶ್ವನಾಥ್ ಜತೆ ರಮೇಶ್ ಜಾರಕಿಹೊಳಿ ಇರುತ್ತಾರೆ. ಕೋರ್ಟ್ ಆದೇಶ ಸಂಬಂಧ ಮಿತ್ರಮಂಡಳಿ ಸಭೆ ಕರೆದು ಚರ್ಚಿಸುತ್ತೇವೆ. ಒಬ್ಬರಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ನಾವೆಲ್ಲಾ ಸೇರುತ್ತೇವೆ. ಕಾನೂನು ತಜ್ಞರ ಜತೆ ಚರ್ಚಿಸುತ್ತೇವೆ. ಸುಪ್ರೀಂಕೋರ್ಟ್ ಗೆ ಹೋಗುವ ಬಗ್ಗೆ ಮಿತ್ರ ಮಂಡಳಿ ಜತೆ ಚರ್ಚಿಸುತ್ತೇವೆ ಎಂದು ನುಡಿದರು.
ರಾಜೀನಾಮೆ ನೀಡುವ ಟೈಂ ಬಂದರೇ ನೋಡೋಣಾ ಬಿಡಿ…
ಸೋತವರನ್ನ ಮಂತ್ರಿ ಮಾಡಲು ಅವರ ಬ್ಯಾಟ್ ಬೀಸುವುದಾದರೇ ಅವರಿಗಾಗಿ ತ್ಯಾಗ ಮಾಡಲಿ ಎಂದಿದ್ದ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿದ ರಮೇಶ್ ಜಾರಕಿಹೊಳಿ, ರಾಜೀನಾಮೆ ನೀಡುವ ಟೈಂ ಬಂದರೆ ನೋಡೋಣ ಬಿಡಿ ಎಂದರು.
Key words: discuss Allied –H.vishwanath- ministrial position-high court- Minister -Ramesh jarakiholi