ಮೈಸೂರು,ಜ,1,2019(www.justkannada.in): ಕಸ ಬೇರ್ಪಡಿಸಿ ಮರುಬಳಕೆ ಮಾಡುವ ಅಧ್ಯಯನ ಮಾಡಲಾಗಿದೆ. ಈ ವಿಧಾನವನ್ನು ಮೈಸೂರಿಗೆ ಅನುಸರಿಸಲು ಚರ್ಚೆ ಮಾಡಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಡಿಸಿ ಅಭಿರಾಂ ಜೀ ಶಂಕರ್, ಮೈಸೂರಿನ ವಿದ್ಯಾರಣ್ಯ ಪುರಂನ ಸುಯೇಜ್ ಫಾಮ್ ನಲ್ಲಿ 2ಲಕ್ಷ ಟನ್ ಕಸ ಸಂಗ್ರಹವಾಗಿದೆ. ಈ ಕಸ ವಿಲೇವಾರಿಗೆ ಹಲವು ವರ್ಷಗಳಿಂದ ಪ್ರಯತ್ನ ಮಾಡಲಾಗುತ್ತಿದೆ. ಈ ಒಂದು ಪ್ರಯತ್ನ ಇದೀಗ ಅಂತಿಮ ಘಟ್ಟಕ್ಕೆ ಬಂದಿದೆ ಎಂದು ತಿಳಿಸಿದರು.
ನಾಗ್ಪುರದ ಬಯೋ ಮೈನಿಂಗ್ ಕಸವಿಲೇವಾರಿ ಘಟಕಕ್ಕೆ ನಾನು, ಮೇಯರ್, ಪಾಲಿಕೆ ಆಯುಕ್ತರು ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿದ್ದೇವು. ಕಸ ವಿಲೇವಾರಿಗೆ ಹೊಸ ಹೊಸ ವಿಧಾನಗಳನ್ನು ಬಳಸಲಾಗ್ತಿದೆ. ಅಂತಹ ವಿಧಾನಗಳನ್ನು ಅಧ್ಯಯನ ಮಾಡಿದ್ದೇವೆ. ಕಸ ಬೇರ್ಪಡಿಸಿ ಮರುಬಳಕೆ ಮಾಡುವ ಅಧ್ಯಯನ ಮಾಡಲಾಗಿದೆ. ಈ ವಿಧಾನವನ್ನು ಮೈಸೂರಿಗೆ ಅನುಸರಿಸಲು ಚರ್ಚೆ ಮಾಡಲಾಗುವುದು. ಈ ಬಗ್ಗೆ ಉಸ್ತುವಾರಿ ಸಚಿವರಿಗೆ ವರದಿ ನೀಡಿ ನಾಳೆ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದರು.
Key words: Discuss — Mysore – dispose – garbage – recycle-DC -Abhiram G. Shankar.